ವಿಸ್ಟಾಡೋಮ್​ ಕೋಚ್​ಗೆ ಚಾಲನೆ! ಪಶ್ಚಿಮ ಘಟ್ಟಗಳ ಸೌಂದರ್ಯ ಸವಿಯುತ್ತಿರುವ ಪ್ರಯಾಣಿಕರು

ಡೆಕ್ಕನ್ ಎಕ್ಸ್​ಪ್ರೆಸ್ ವಿಶೇಷ ರೈಲಿನಲ್ಲಿ ವಿಸ್ಟಡೋಮ್​ ಕೋಚ್​ - youtube
Published on

ಮುಂಬೈ : ಮುಂಬೈ-ಪುಣೆ ಮಾರ್ಗದ ಡೆಕ್ಕನ್ ಎಕ್ಸ್​ಪ್ರೆಸ್​ ವಿಶೇಷ ರೈಲಿನಲ್ಲಿ ಅಳವಡಿಸಲಾಗಿರುವ ಆಧುನಿಕ ವಿಸ್ಟಾಡೋಮ್​ ಕೋಚ್​ನ ಮೊದಲನೇ ಟ್ರಿಪ್​ಗೆ ಇಂದು ಸೀಟುಗಳು ಪೂರ್ಣ ಭರ್ತಿ ಆಗಿವೆ. ಪ್ರಯಾಣಿಕರು ಪಾರದರ್ಶಕವಾದ ದೊಡ್ಡ ಕಿಟಕಿಗಳಿಂದ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡುವ ಅನುಭವ ಹೊಂದುತ್ತಿದ್ದಾರೆ.

ಪಶ್ಚಿಮ ಘಟ್ಟಗಳ ಸುಂದರ ನದಿಗಳು, ಕಣಿವೆ ಮತ್ತು ಜಲಪಾತಗಳನ್ನು ನೋಡುತ್ತಾ ಆರಾಮದಾಯಕವಾದ ಅಂತರರಾಷ್ಟ್ರೀಯ ಮಟ್ಟದ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್​ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಇಂದು ಚಾಲನೆ ನೀಡಲಾದ ಈ ಕೋಚ್​ನ ಪ್ರಯಾಣದ ಸಮಯದಲ್ಲಿ ಪಶ್ಚಿಮ ಘಟ್ಟಗಳ ಪಾನೊರಾಮಿಕ್​ ವ್ಯೂ ಲಭಿಸುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net