

ಹೆಬ್ರಿ: ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಶಾಂತಿನಿಕೇತನ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ. ಸಂಸ್ಥೆಯ ಕಾರ್ಯವೈಖರಿ ಸಮಾಜಕ್ಕೆ ಮಾದರಿ ಎಂದು ತುಮಕೂರು ವಿವಿ ಉಪಹಣಕಾಸು ಅಧಿಕಾರಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಎಂ.ಡಿ ಹೇಳಿದರು.
ಕುಡಿಬೈಲ್ ಕುಚ್ಚೂರಿನಲ್ಲಿರುವ ಶಾಂತಿನಿಕೇತನ ಯುವವೃಂದ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಮಕೂರು ವಿವಿ ಪ್ರಾಧ್ಯಾಪಕ ಅರುಣ್ಕುಮಾರ್ ಕೆ., ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ರಾಜೇಶ್, ಶಾಂತಿನಿಕೇತನ ಯುವವೃಂದ ಅಧ್ಯಕ್ಷ ದೀಕ್ಷಿತ್ ನಾಯಕ್, ಸಿಇಒ ನರೇಂದ್ರ, ನಿರ್ದೇಶಕರಾದ ಮಹೇಶ್, ಗಣೇಶ್ ಕುಡಿಬೈಲು, ವ್ಯವಸ್ಥಾಪಕಿ ರಾಜೇಶ್ರೀ ಇದ್ದರು.