

ಕಾರ್ಕಳ : ಪಳ್ಳಿ ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ ಸಾನ್ನಿಧ್ಯದಲ್ಲಿ ಆ.9ರಿಂದ 11ರವರೆಗೆ ನಡೆಯುವ ಶತಚಂಡಿಕಾ ಮಹಾಯಾಗ ಪ್ರಯುಕ್ತ ಶುಕ್ರವಾರ ವಿವಿಧ ಧಾರ್ಮಿಕ ಅನುಷ್ಠಾನ ಪ್ರಾರಂಭಗೊಂಡಿತು.
ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಉಪಸ್ಥಿತಿಯಲ್ಲಿ ವೈದಿಕರಿಂದ ಯಾಗದ ಮಂಟಪದಲ್ಲಿ ಪ್ರಧಾನ ದೇವತಾ ಪ್ರತಿಷ್ಠಾಪನೆ, ಶತಚಂಡಿಕಾ ಪಾರಾಯಣ ಪ್ರಾರಂಭ, ವಿಷ್ಣುಯಾಗದ ಪ್ರಾರಂಭ, ದೇವರ ಉಭಯ ಸಾನ್ನಿಧ್ಯದಲ್ಲಿ ನವಕಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪರಿವಾರ ದೇವತಾರಾಧನೆ, ಯಾಗದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.