ಮಹಿಳಾ ಸಹಕಾರಿ ಸಂಘದ ಸಭೆ

meeting
ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ವಾರ್ಷಿಕ ಸಾಮಾನ್ಯ ಸಭೆ ಹೊಸಾಡು ಗ್ರಾಪಂ ಸಭಾಭವನದಲ್ಲಿ ನಡೆಯಿತು
Published on

ಗಂಗೊಳ್ಳಿ: ಹೊಸಾಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹೊಸಾಡು ಗ್ರಾಪಂ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಸಂಘದ ಅಧ್ಯಕ್ಷೆ ಸುಮತಿ ಅಧ್ಯಕ್ಷತೆ ವಹಿಸಿದ್ದರು. ಹೈನುಗಾರಿಕೆಗೆ ಉತ್ತೇಜನ, ಹಾಲು ಉತ್ಪಾದನೆ ಹೆಚ್ಚಳ ಮಾಡುವ ಕುರಿತು ಚರ್ಚಿಸಲಾಯಿತು. ಸದಸ್ಯರಿಗೆ ಶೇ.65 ಬೋನಸ್, ಶೇ.10 ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು. ಹಾಲು ಉತ್ಪಾದನೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಹೈನುಗಾರ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷೆ ಬೇಬಿ, ನಿರ್ದೇಶಕರಾದ ಮಲ್ಲಿಕಾ ಶೆಟ್ಟಿ, ಕುಸುಮಾವತಿ, ಗಿರಿಜಾ ಎಂ.ಪಿ., ನೇತ್ರಾವತಿ ಶೆಟ್ಟಿ, ಜ್ಯೋತಿ ಶೆಟ್ಟಿ, ವನಜಾ ಸಿ., ಸವಿತಾ, ಸಿಬ್ಬಂದಿ ಉಪಸ್ಥಿತರಿದ್ದರು. ಮಲ್ಲಿಕಾ ಶೆಟ್ಟಿ ಸ್ವಾಗತಿಸಿದರು. ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಶ್ರೀಶ ಕಾರಂತ ವಾರ್ಷಿಕ ವರದಿ ವಾಚಿಸಿದರು. ಹಾಲು ಪರೀಕ್ಷಕಿ ಸಂಧ್ಯಾ ಎಸ್.ಕೆ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net