

ಗಂಗೊಳ್ಳಿ: ಶಿವಮೊಗ್ಗ ಎ.ಜಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಆಶ್ರಯದಲ್ಲಿ ಶಿವಮೊಗ್ಗದಲ್ಲಿ ನಡೆದ ಇಂಟರ್‌ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಷಿಪ್ 14ರ ಕೆಳಗಿನ ವರ್ಷದ ವಯೋಮಿತಿಯ ಕಟಾ, ಕುಮಿಟೆ ವಿಭಾಗದಲ್ಲಿ ಬೀಜಾಡಿಯ ಝರಾ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಈಕೆ ಕುಂದಾಪುರದ ಬೀಜಾಡಿ ಇಮ್ರಾನ್, ಆಸ್ಮಾ ದಂಪತಿ ಪುತ್ರಿ. ಕೀಯೋಷಿ ಕಿರಣ್ ಕುಂದಾಪುರ, ರೆನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಹಿ ಸಿಹಾನ್, ಶೇಕ್ ಸೇನ್ ಸಾಹಿ ಶಶಾಂಕ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ