

ಹೆಬ್ರಿ: ಕಾರ್ಗಿಲ್ ಪ್ರದೇಶದ ಸ್ಥಳಗಳನ್ನು ನಮ್ಮ ಸೇನೆ ವಶಪಡಿಸಿಕೊಂಡು ರಾಷ್ಟ್ರಧ್ವಜ ಹಾರಿಸಿದ್ದು ನಮ್ಮ ಸೈನಿಕರ ಶಕ್ತಿ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಈ ವಿಜಯ ದಿನಾಚರಣೆಯ ಯುದ್ಧದಲ್ಲಿ ಭಾಗಿಯಾಗಿದ್ದು ನನಗೆ ಸಂತಸ ತಂದಿದೆ. ಭಾರತೀಯ ಸೈನ್ಯ ಸೇರುವ ಕನಸು ಹೊತ್ತವರು ಮತ್ತು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಬಯಸುವವರು ಮೊದಲು ತಮ್ಮ ಜೀವನದಲ್ಲಿ ದೂರದೃಷ್ಟಿ, ಬದ್ಧತೆ, ಸಿದ್ಧತೆ ಮತ್ತು ನೂರು ಪ್ರತಿಶತ ತೊಡಗುವಿಕೆಯಲ್ಲಿ ನಿರತರಾಗಬೇಕು ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜಗದೀಶ ಎಚ್.ಹೇಳಿದರು.
ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ನಡೆದ ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ವಾತನಾಡಿದರು.
ವಿದ್ಯಾಸಾಗರ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಅಶೋಕ ಕುವಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ, ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್, ಶಿಕ್ಷಕರಾದ ಶ್ಯಾಮಲಾ, ಪಿ. ವಿ.ಆನಂದ ಸಾಲಿಗ್ರಾಮ, ಮಹೇಶ ನಾಯ್ಕ ಕೆ., ರುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಮಹೇಶ್ ಎಂ.ಇದ್ದರು.