ಎಷ್ಟೇ ಎತ್ತರಕ್ಕೇರಿದರೂ ಸಂಸ್ಕೃತಿ ಮರೆಯಬಾರದು

pdb (2)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ತನ್ನ ಸಂಸ್ಕೃತಿ ಮರೆತರೆ ಸೂತ್ರ ಕಡಿದ ಗಾಳಿಪಟಾದಂತಾಗುತ್ತಾನೆ. ಮಕ್ಕಳು ಎಷ್ಟೇ ದೂರ ಹೋದರೂ ನಮ್ಮ ಸಂಸ್ಕೃತಿ ಪರಿಚಯ ಕಳೆದುಕೊಂಡರೆ ಬೇರಿನ ಸಂಪರ್ಕ ವಿಲ್ಲದ ಕೊಂಬೆಗಳಾಗುತ್ತಾರೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು.

ಶ್ರೀಗಳ ಜನ್ಮವರ್ಧಂತಿ ಅಂಗವಾಗಿ ಪಡುಕುತ್ಯಾರಿನಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ಅಭಿನಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮೂಡುಬಿದಿರೆ ಎಸ್‌ಎನ್‌ಎಮ್ ಉಪನ್ಯಾಸಕ ಎಸ್. ಪಿ ಗುರುದಾಸ್ ಮಂಗಳೂರು ವಾತನಾಡಿ, ಸವಾಜವೆನ್ನುವ ಚಕ್ರ ಮುಂದೆ ಹೋಗಲು ಪ್ರತಿಯೊಬ್ಬರೂ ಕಡ್ಡಿಗಳಾಗಿ ಗುರುಮಠವೆಂಬ ಕೇಂದ್ರಕ್ಕೆ ಸಂಪರ್ಕಿತರಾದರೆ ಸವಾಜ ಮುಂದೆ ಹೋಗಲು ಸಾಧ್ಯ ಎಂದರು.

ಶೈಕ್ಷಣಿಕ ಸಾಧನೆ ಮಾಡಿದ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಸ್ವಾಮೀಜಿ ಅಭಿನಂದಿಸಿದರು.

ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು.

ವಿಶ್ವಕರ್ಮ ಸಹಕಾರ ಬ್ಯಾಂಕ್ ಮಂಗಳೂರು ಅಧ್ಯಕ್ಷ ಹರೀಶ್ ಆಚಾರ್ಯ ಜಲಕದಕಟ್ಟೆ, ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೊ.ಆಪ್ ಸೊಸೈಟಿ ಮಂಗಳೂರು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು, ಪ್ರಮುಖರಾದ ಬಾಲಕೃಷ್ಣ ಹೊಸಂಗಡಿ, ಚಂದ್ರಯ್ಯ ಆಚಾರ್ಯ ಕಳಿ, ಜಗದೀಶ್ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಗಣೇಶ್ ಆಚಾರ್ಯ ಕೆಮ್ಮಣ್ಣು ಉಪಸ್ಥಿತರಿದ್ದರು.

ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು. ವಕೀಲ ಕೆ.ಎಂ ಗಂಗಾಧರ ಕೊಂಡೆವೂರು ಹಾಗೂ ಗೀತಾ ಚಂದ್ರ ಕಾರ್ಕಳ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net