ಕೋಟ: ಸಾಲಿಗ್ರಾಮದ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ, ವಿಶ್ವಜ್ಯೋತಿ ಮಹಿಳಾ ಬಳಗ ಆಶ್ರಯದಲ್ಲಿ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಸೋಮವಾರ ನಡೆಯಿತು.
ಲಕ್ಷ್ಮೀಕಾಂತ್ ಶರ್ಮ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೆರಿದವು. ಸಂಘದ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ ದಂಪತಿ ಹಾಗೂ ಕೋಟದ ಶ್ರೀ ಗುರುಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ ಭಾಗಿಯಾದರು. ವಿಶ್ವಜ್ಯೋತಿ ಮಹಿಳಾ ಬಳಗದಿಂದ ಮನೋರಂಜನಾ ಕಾರ್ಯಕ್ರಮ, ಕಲಾ ವೇದಿಕೆ ತಂಡದಿಂದ ನೃತ್ಯ ಗಾನವೈಭವ, ಸುವಿನ್ಯಾ ಆಚಾರ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿ ಕೇಶವ ಆಚಾರ್, ಕೋಶಾಧಿಕಾರಿ ರಮೇಶ್ ಆಚಾರ್, ವಿಶ್ಚಕರ್ಮ ಕಲಾವೃಂದ ಅಧ್ಯಕ್ಷ ವೆಂಕಟೇಶ ಆಚಾರ್, ಕಾರ್ಯದರ್ಶಿ ನಿತ್ಯಾನಂದ ಆಚಾರ್, ಕೋಶಾಧಿಕಾರಿ ರಾಘವೇಂದ್ರ ಆಚಾರ್ ಚೇಂಪಿ, ವಿಶ್ವಜ್ಯೋತಿ ಬಳಗ ಅಧ್ಯಕ್ಷೆ ಸವಿತಾ ಚಂದ್ರಶೇಖರ್ ಆಚಾರ್, ಕಾರ್ಯದರ್ಶಿ ವಾಣಿ ಸುರೇಶ್ ಆಚಾರ್, ಕೋಶಾಧಿಕಾರಿ ಸುಶೀಲಾ ಸತೀಶ್ ಆಚಾರ್ ಮತ್ತಿತರರು ಇದ್ದರು.