ಮಾಣಿ ಚೆನ್ನಕೇಶವ ದೇಗುಲದಲ್ಲಿ ಸೋಣಾರತಿ

maani
ರಥಬೀದಿ ಗೆಳೆಯರು, ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶೇಷ ಸೋಣೆ ಆರತಿ ನಡೆಯಿತು.
Published on

ಕೋಟ: ಇಲ್ಲಿನ ರಥಬೀದಿ ಗೆಳೆಯರು, ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶೇಷ ಸೋಣೆ ಆರತಿ ಭಾನುವಾರ ನಡೆಯಿತು.

ಚಂದ್ರಶೇಖರ ಉಪಾಧ್ಯ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪ್ರಧಾನ ಅರ್ಚಕ ಅನಂತರಾಮ ಬಾಯರಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವಿಶೇಷ ಹೂವುಗಳಿಂದ ದೇವಳ ಶೃಂಗರಿಸಲಾಗಿದ್ದು, ವಿಶೇಷ ಖಾದ್ಯಗಳನ್ನು ಪ್ರಸಾದವಾಗಿ ಹಂಚಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಹೊಳ್ಳ, ಸದಸ್ಯರಾದ ಶ್ರೀಧರ ಶಾಸ್ತ್ರಿ,ಮಂಜುಳಾ ಸಿ. ಉಪಾಧ್ಯಾ, ಸಾವಿತ್ರಿ ಆರ್ ಶೆಟ್ಟಿಗಾರ್, ಮಾಧವ ಆಚಾರ್, ಜಿ.ವಿಠ್ಠಲ್ ಪೂಜಾರಿ, ಶೀನ ನಾಯ್ಕ, ಶಿವ ಮರಕಾಲ, ರಥಬೀದಿ ಗೆಳೆಯರ ಪ್ರಮುಖರಾದ ಸುಧೀಂದ್ರ ಕಾರಂತ್, ಉಮೇಶ್ ದೇವಾಡಿಗ, ವಿಶ್ವನಾಥ ಐತಾಳ್, ಕಾರ್ತಿಕ್ ನಾವಡ, ಕಾರ್ತಿಕ ಅಧಿಕಾರಿ, ಉತ್ಸವ ಸಮಿತಿಯ ಮಾಜಿ ಅಧ್ಯಕ್ಷ ಡಾ.ಹೇಮಂತ್, ಸಾಲಿಗ್ರಾಮ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net