ನೆಲ್ಯಾಡಿ: ಇಲ್ಲಿನ ವಿಶ್ವಕರ್ಮ ಸೇವಾ ಸಂಘದ ವತಿಯಿಂದ 16ನೇ ವರ್ಷದ ವಿಶ್ವಕರ್ಮ ಪೂಜೆ ಕೇಶವ ಆಚಾರ್ಯ ಪೌರೋಹಿತ್ಯದಲ್ಲಿ ಶಿರಾಡಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಬೆಳಗ್ಗೆ ವಿಶ್ವಕರ್ಮ ಪೂಜೆ ಬಳಿಕ ಭಜನೆ ನಡೆಯಿತು. ಬಳಿಕ ಮಹಾಪೂಜೆ ಜರುಗಿತು. ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಪಿ.ಟಿ. ಕಡಬ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಮಾಜದವರು ಕೈ ಜೋಡಿಸಬೇಕು. ಈ ಮೂಲಕ ಸಂಘಟಿತರಾಗಿ ನಾವು ಇನ್ನಷ್ಟು ಸದೃಢರಾಗಬೇಕು ಎಂದರು.
ಪುರೋಹಿತ ಕೇಶವ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ತಂಗಮಣಿ ಕೆ.ಆರ್. ಶಿರಾಡಿ ಅವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿ ವಿ.ಕ.ಸೇ.ಸಂ.ದ ನಿವೇಶನ ಖರೀದಿ ಅಧ್ಯಕ್ಷ ಶಶಿಧರ ಕೆ.ಆರ್.ಶಿರಾಡಿ ಪ್ರಾಸ್ತಾವಿಸಿದರು. ಸಂಘದ ಕಾರ್ಯದರ್ಶಿ ಶಶೀಂದ್ರ ಆಚಾರ್ಯ ವರದಿ ವಾಚಿಸಿದರು. ಸುರೇಂದ್ರ ಶಿರಾಡಿ ಸ್ವಾಗತಿಸಿದರು. ಶಿಕ್ಷಕಿ ಉಷಾ ಕೆ.ಕೆ. ವಂದಿಸಿದರು. ಶಿಕ್ಷಕಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು.