ಸಿದ್ಧಿ ಸಮಾಧಿ ಯೋಗ ಕಾರ್ಯಾಗಾರ ಉದ್ಘಾಟನೆ

sub_siddi-samadhi
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸಿದ್ಧಿ ಸಮಾಧಿ ಯೋಗ ಮಾಹಿತಿ ಕಾರ್ಯಾಗಾರ ಶುಕ್ರವಾರ ಉದ್ಘಾಟನೆಗೊಂಡಿತು.

ಸುಬ್ರಹ್ಮಣ್ಯದ ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್. ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಅಜಯ್ ಡಿ.ಎಸ್ ಹಾಗೂ ಎಂ.ಆರ್.ದೀಪಕ್ ಸಿದ್ಧಿ ಸಮಾಧಿ ಯೋಗದ ಮಹತ್ವ ವಿವರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ವಲಯ ಸೇನಾನಿ ವಿಶ್ವನಾಥ ನಡುತೋಟ, ಕುಮಾರಸ್ವಾಮಿ ವಿದ್ಯಾಲಯದ ಪ್ರಾಂಶುಪಾಲ ಸಂಕೀರ್ಥನ ಹೆಬ್ಬಾರ್, ಮುಖ್ಯಶಿಕ್ಷಕಿ ವಿದ್ಯಾರತ್ನಾ, ರೋಟರಿ ಕ್ಲಬ್‌ನ ವಿಜಯ ಕುಮಾರ್, ಪ್ರಮುಖರಾದ ವಿಶೃತ್ ಕುಮಾರ್, ನವೀನ್, ಅಶೋಕ್ ಕುಮಾರ್ ಮೂಲೆಮಜಲು, ಸುಬ್ರಹ್ಮಣ್ಯ ಅತ್ಯಾಡಿ, ದುಗ್ಗಪ್ಪ ಅಗ್ರಹಾರ, ಶ್ರೀಕೃಷ್ಣ ಶರ್ಮ, ಮನೋಜ್, ವಿಠಲ ಮೂಲ್ಯ, ವರ್ಷ ಕಾಮತ್, ಭಾರತಿ ದಿನೇಶ್, ಸುನೀತಾ ನವೀನ್, ಅರುಣಾ, ಪೂರ್ಣಿಮಾ, ಅಂಬಿಕಾ ಮುಂತಾದವರು ಇದ್ದರು. ಮುಂದಿನ ವಾರದಿಂದ 15 ದಿನ ಬೆಳಗ್ಗೆ 4 ಗಂಟೆಯಿಂದ 7ರ ತನಕ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಶಿಬಿರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net