

ಮಂಗಳೂರು: ನಗರದ ಹೊರ ವಲಯದ ಅಡ್ಯಾರ್ನಲ್ಲಿ ಶನಿವಾರ ಏಕಾಏಕಿಯಾಗಿ ಬಿಎಂಡಬ್ಲೂೃ ಕಾರು ಹೊತ್ತಿ ಉರಿದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಬಿ.ಸಿ.ರೋಡ್ನ ಗುರುದೀಪ್ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ನೂರಾರು ಮಂದಿ ಕಾರು ಉರಿಯುವುದನ್ನು ವೀಕ್ಷಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಿಳಿಸಿದ್ದಾರೆ.
ಈ ತಿಂಗಳಲ್ಲಿ ಇದು ಎರಡನೇ ಪ್ರಕರಣ. ಸೆ.5ರಂದು ಸುರತ್ಕಲ್ನಲ್ಲಿ ಬಿ.ಎಂ.ಡಬ್ಲೂೃ ಕಾರು ಬೆಂಕಿಗಾಹುತಿಯಾಗಿತ್ತು. ಆ ಘಟನೆಯಲ್ಲೂ ಯಾರಿಗೂ ಯಾವುದೇ ಅಪಾಯ ಉಂಟಾಗಿರಲಿಲ್ಲ.