ವಿಶ್ವಕರ್ಮರು ಕಾಯಕ ನಿಷ್ಠವಂತರು

19 Hanumasagara 2
ಹನುಮಸಾಗರ ಸಮೀಪದ ಶ್ಯಾಡಲಗೇರಿ ಗ್ರಾಮದ ಶ್ರೀ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು. ತಿರ್ಥೇಂದ್ರ ಸ್ವಾಮಿಜಿ, ನಾಗಲಿಂಗಪ್ಪ ಸ್ವಾಮೀಜಿ, ಅಜೇಂದ್ರ ಸ್ವಾಮೀಜಿ, ವೆಂಕಟೇಶ ಸ್ವಾಮೀಜಿ, ದಿವಾಕರ ಸ್ವಾಮೀಜಿ, ಉಪನ್ಯಾಸಕ ಗುರುರಾಜ ಹಡಪದ, ಮಾನಪ್ಪ ಪತ್ತಾರ, ಶಾಂತಪ್ಪ ಬಡಿಗೇರ, ಅರವಿಂದ ಬಡಿಗೇರ, ಮಹೇಶ್ ಬಡಿಗೇರ, ಶ್ರೀಧರ ಪತ್ತಾರ, ಮೌನೇಶ ಪಾಟೀಲ, ದೇವು ಬಡಿಗೇರ, ಬಸಪ್ಪ ಬಡಿಗೇರ ಇತರರಿದ್ದರು.
Published on

ಹನುಮಸಾಗರ: ವಿಶ್ವಕರ್ಮರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ಯಾಡಲಗೇರಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ತಿರ್ಥೇಂದ್ರ ಸ್ವಾಮಿಜಿ ಹೇಳಿದರು.

ಸಮೀಪದ ಶ್ಯಾಡಲಗೇರಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು. ವಿಶ್ವಕರ್ಮರು ತಮ್ಮ ಕಾಯಕದ ಮೂಲಕ ಕಲೆ ಮತ್ತು ವಾಸ್ತುಶಿಲ್ಪ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ.

ಅವರ ಕಾಯಕ ನಿಷ್ಠೆ ಶ್ರೇಷ್ಠವಾದದ್ದು ಎಂದರು. ನಾಗಲಿಂಗಪ್ಪ ಸ್ವಾಮೀಜಿ, ಅಜೇಂದ್ರ ಸ್ವಾಮೀಜಿ, ವೆಂಕಟೇಶ ಸ್ವಾಮೀಜಿ, ದಿವಾಕರ ಸ್ವಾಮೀಜಿ, ಉಪನ್ಯಾಸಕ ಗುರುರಾಜ ಹಡಪದ, ಮಾನಪ್ಪ ಪತ್ತಾರ, ಶಾಂತಪ್ಪ ಬಡಿಗೇರ, ಅರವಿಂದ ಬಡಿಗೇರ, ಮಹೇಶ್ ಬಡಿಗೇರ, ಶ್ರೀಧರ ಪತ್ತಾರ, ಮೌನೇಶ ಪಾಟೀಲ, ದೇವು ಬಡಿಗೇರ, ಬಸಪ್ಪ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net