ಬಯಸದೇ ಬಂದ ಭಾಗ್ಯ! ಆರ್ಡರ್ ಮಾಡದೆ ಮನೆ ಬಾಗಿಲಿಗೆ ಬಂದವು 100 ಪಾರ್ಸೆಲ್

virginiawoman
Published on

ಅಮರಿಕ: ಆನ್‌ಲೈನ್ ಶಾಪಿಂಗ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನೆಯಲ್ಲೇ ಕುಳಿತುಕೊಂಡೇ ಅಗತ್ಯ ವಸ್ತುಗಳನ್ನೆಲ್ಲ ಮನೆಬಾಗಿಲಿಗೆ ತಲುಪಿಸುವುದರಿಂದ ಅಂಗಡಿಗೆ ಹೋಗಿ ಕೊಳ್ಳಲು ಸಮಯ ವ್ಯರ್ಥ ಎಂದು ಹಲವರು ಯೋಚಿಸುತ್ತಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಶಾಪಿಂಗ್​​ ಹೆಚ್ಚಾಗುತ್ತಿದೆ.

ಆರ್ಡರ್ ಮಾಡಿದ ಅನೇಕ ವಸ್ತುಗಳು ಕೆಲವೊಮ್ಮೆ ತಪ್ಪು ವಿಳಾಸಕ್ಕೆ ಹೋಗುತ್ತವೆ. ಕೆಲವರಿ ಒಮ್ಮೊಮ್ಮೆ ಇಂತಹ ಅನುಭವವಾಗುತ್ತದೆ. ಆದರೆ ಒಬ್ಬ ಮಹಿಳೆಗೆ ಇದ್ದಕ್ಕಿದ್ದಂತೆ ಶಾಪಿಂಗ್ ವೆಬ್‌ಸೈಟ್ Amazonನಿಂದ ಸಾಕಷ್ಟು ಪಾರ್ಸೆಲ್‌ ಮನೆಗೆ ಬಂದಿದೆ.

ಆಶ್ಚರ್ಯಕರವೆನೆಂದರೆ ಮಹಿಳೆ ಒಂದೇ ಒಂದು ಐಟಂ ಬಂದಿಲ್ಲ. ಬದಲಾಗುವ 100ಕ್ಕೂ ಹೆಚ್ಚು ಪ್ಯಾಕೇಜ್‌ಗಳನ್ನು ಅವರ ಮನೆಗೆ ತಲುಪಿಸಲಾಗಿದೆ. ಕೆಲವೊಮ್ಮೆ ಮುಂಗಡ ಪಾವತಿ ಮತ್ತು ಕೆಲವೊಮ್ಮೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ನೀಡಲಾಗುತ್ತದೆ. ವರ್ಜೀನಿಯಾದ ಮಹಿಳೆ ಯಾವುದೇ ಹಣವನ್ನು ನೀಡದೆ, ಬುಕ್​ ಮಾಡದೇ ಇದ್ದಕ್ಕಿದ್ದಂತೆ ಶಾಪಿಂಗ್ ವೆಬ್‌ಸೈಟ್ Amazonನಿಂದ ಬಹಳಷ್ಟು ಪಾರ್ಸೆಲ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಆದರೆ, ಆಶ್ಚರ್ಯಕರವಾಗಿ, ಮಹಿಳೆ ಒಂದೇ ಒಂದು ಐಟಂ ಅನ್ನು ಆರ್ಡರ್ ಮಾಡಲಿಲ್ಲ. ಆದರೆ 100ಕ್ಕೂ ಹೆಚ್ಚು ಪ್ಯಾಕೇಜ್‌ಗಳನ್ನು ಮನೆ ಬಾಗಿಲಿಗೆ ಬಂದಿದೆ.

ವರ್ಜೀನಿಯಾದ ಸಿಂಡಿ ಸ್ಮಿತ್ ತನ್ನ ಪ್ರಿನ್ಸ್ ವಿಲಿಯಂ ಕೌಂಟಿಯ ಮನೆಗೆ ಸುಮಾರು ಹೆಡ್‌ಲ್ಯಾಂಪ್‌ಗಳು, ಅಂಟುಗನ್‌ಗಳು ಮತ್ತು ಡಜನ್‌ಗಟ್ಟಲೆ ಬೈನಾಕ್ಯುಲರ್‌ಗಳನ್ನು ಒಳಗೊಂಡ ಪಾರ್ಸೆಲ್​​​ ಬಂದಿದೆ. ಪ್ಯಾಕೇಜ್‌ನಲ್ಲಿ ಸ್ಮಿತ್‌ನ ವಿಳಾಸ ಸರಿಯಾಗಿದೆ.

ಅಮೆಜಾನ್‌ನಿಂದ ಮಾರಾಟವಾಗದ ದಾಸ್ತಾನುಗಳನ್ನು ತೆಗೆದುಹಾಕಲು ಬೇರೆ.. ಬೇರೆ ವಿಳಾಸಗಳಿಗೆ ಪ್ಯಾಕೇಜ್‌ಗಳನ್ನು ಕಳುಹಿಸುವುದರ ಪರಿಣಾಮವಾಗಿ, ಈ ಪಾರ್ಸೆಲ್​​ ಬಂದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net