More

    IPL 2024: ಆರ್​ಸಿಬಿ ಸೋಲಿನ ನಡುವೆ ವಿಶಿಷ್ಟ ದಾಖಲೆ ಬರೆದ ವಿರಾಟ್​ ಕೊಹ್ಲಿ!

    ಕೋಲ್ಕತ: ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ಒಂದೇ ತಂಡದ ಪರ 250 ಸಿಕ್ಸರ್​ ಸಿಡಿಸಿದ ಮೊದಲ ಬ್ಯಾಟರ್​ ಎಂಬ ವಿಶಿಷ್ಟ ಸಾಧನೆ ಮಾಡಿದ್ದಾರೆ. 18 ರನ್​ಗಳ ಕಿರು ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಸಿಡಿಸುವ ಮೂಲಕ ಅವರು ಈ ಹೆಗ್ಗಳಿಕೆಗೆ ಪಾತ್ರರಾದರು.

    ಆರ್​ಸಿಬಿ ಪರ ಕ್ರಿಸ್​ ಗೇಲ್​ 239 ಮತ್ತು ಎಬಿ ಡಿವಿಲಿಯರ್ಸ್​ 238 ಸಿಕ್ಸರ್​ ಸಿಡಿಸಿರುವುದು ನಂತರದ ಅತ್ಯುತ್ತಮವಾಗಿದೆ. ಆದರೆ ಚಾಂಪಿಯನ್ಸ್​ ಲೀಗ್​ ಟೂರ್ನಿಯನ್ನೂ ಸೇರಿಸಿದರೆ ಗೇಲ್​ ಆರ್​ಸಿಬಿ ಪರ ಸರ್ವಾಧಿಕ 263 ಸಿಕ್ಸರ್​ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್​ನಲ್ಲಿ ತಂಡವೊಂದರ ಪರ ಗರಿಷ್ಠ ಸಿಕ್ಸರ್​ ಸಾಧನೆಯಾಗಿದೆ.

    ವಿರಾಟ್​ ಕೊಹ್ಲಿ (250) ಐಪಿಎಲ್​ನಲ್ಲಿ 250 ಸಿಕ್ಸರ್​ ಸಿಡಿಸಿದ 4ನೇ ಬ್ಯಾಟರ್​. ಕ್ರಿಸ್​ ಗೇಲ್​ (357), ರೋಹಿತ್​ ಶರ್ಮ (275), ಎಬಿ ಡಿವಿಲಿಯರ್ಸ್​ (251) ಮೊದಲ ಮೂವರು.

    See also  ಗರ್ಭಿಣಿ ಎಂದು ಗೊತ್ತಿಲ್ಲದೆ ವಿಮಾನವೇರಿದ ಮಹಿಳೆಯಿಂದ ಗಂಡು ಮಗುವಿಗೆ ಜನ್ಮ: ಆಗಸದಲ್ಲಿ ಮಹಾ ಪವಾಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts