ಮತ್ತೊಮ್ಮೆ ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ನಿರ್ಧಾರ ಪ್ರಕಟಿಸಿದ ದಿನೇಶ್​ ಕಾರ್ತಿಕ್!

web karthik
Published on

ಬೆಂಗಳೂರು: ಇದೇ ನನ್ನ ಕೊನೇ ಐಪಿಎಲ್​ ಎಂದು ಈಗಾಗಲೆ ಹೇಳಿಕೊಂಡಿರುವ ಹಿರಿಯ ವಿಕೆಟ್​ ಕೀಪರ್​-ಬ್ಯಾಟರ್​ ದಿನೇಶ್​ ಕಾರ್ತಿಕ್​, ಮುಂಬರುವ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶ ದೊರೆತರೆ ಅದಕ್ಕೆ ಶೇ. 100 ಸಿದ್ಧನಾಗಿರುವೆ ಎಂದಿದ್ದಾರೆ.

2022ರ ಟಿ20 ವಿಶ್ವಕಪ್​ನಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿರುವ 39 ವರ್ಷದ ಕಾರ್ತಿಕ್​, ಸದ್ಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ತೋರಿರುವ ಭರ್ಜರಿ ಫಾಮ್​ರ್ನಿಂದ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

"ನನ್ನ ವೃತ್ತೀಜಿವನದ ಈ ಹಂತದಲ್ಲಿ ಭಾರತ ಪರ ಆಡುವುದು ಶ್ರೇಷ್ಠ ಅನುಭವವಾಗಿರಲಿದೆ. ಭಾರತ ಪರ ಇನ್ನೊಂದು ಟಿ20 ವಿಶ್ವಕಪ್​ ಆಡುವುದು ನನ್ನ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದು' ಎಂದು ಕಾರ್ತಿಕ್​ ಹೇಳಿದ್ದಾರೆ. ಭಾರತ ತಂಡ ಸದ್ಯ ವಿಕೆಟ್​ ಕೀಪರ್​-ಬ್ಯಾಟರ್​ ಆಯ್ಕೆಯ ಗೊಂದಲದಲ್ಲಿದ್ದು, ರಿಷಭ್​ ಪಂತ್​, ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​, ಕೆಎಲ್​ ರಾಹುಲ್​ ಜತೆಗೆ ಕಾರ್ತಿಕ್​ ಕೂಡ ಪೈಪೋಟಿಯಲ್ಲಿದ್ದಾರೆ.

ರಾಹುಲ್​ ದ್ರಾವಿಡ್​, ರೋಹಿತ್​ ಮತ್ತು ಅಜಿತ್​ ಅಗರ್ಕರ್​ ಆರಿಸುವ ಅತ್ಯುತ್ತಮ ಭಾರತ ತಂಡದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಅವರ ಆಯ್ಕೆಯನ್ನು ನಾನು ಗೌರವಿಸುತ್ತೇನೆ ಎಂದೂ ಕಾರ್ತಿಕ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net