More

    ಸಿಎಸ್​ಕೆ ವಿರುದ್ಧದ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕನ್ನಡಿಗ ಕೆಎಲ್​ ರಾಹುಲ್​

    ಲಖನೌ: ನನ್ನ ಹೆಚ್ಚಿನ ನಿರ್ಧಾರಗಳು ಫಲಿಸಿದವು. ಇದೊಂದು ಉತ್ತಮ ದಿನವಾಗಿತ್ತು ಎಂದು ಲಖನೌ ಸೂಪರ್​ಜೈಂಟ್ಸ್​ ನಾಯಕ ಕೆಎಲ್​ ರಾಹುಲ್​, ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ 8 ವಿಕೆಟ್​ಗಳಿಂದ ಗೆದ್ದ ಬಳಿಕ ಸಂಭ್ರಮಿಸಿದರು.

    “ನಾವು 160 ರನ್​ಗಳಿಗೆ ನಿಯಂತ್ರಿಸಲು ಬಯಸಿದ್ದೆವು. ಆದರೆ ಕೊನೆಯಲ್ಲಿ ಎಂಎಸ್​ ಧೋನಿ ಕಣಕ್ಕಿಳಿದಾಗ ನಮ್ಮ ಬೌಲರ್​ಗಳು ಸ್ವಲ್ಪ ಹೆದರಿದಂತೆ ಅನಿಸಿತು. ನಮ್ಮ ತವರಿನ ಪ್ರೇಕ್ಷಕರೂ ಅವರ ಪರವಾಗಿ ನಿಂತಿದ್ದರು. ಉತ್ತಮವಾಗಿ ಬ್ಯಾಟಿಂಗ್​ ಮಾಡಿದರೆ ನಮಗೆ ಚೇಸಿಂಗ್​ ಮಾಡುವ ವಿಶ್ವಾಸವಿತ್ತು’ ಎಂದು ಕೆಎಲ್​ ರಾಹುಲ್​ ಹೇಳಿದರು.

    ಸಿಎಸ್​ಕೆ ತಂಡದ 177 ರನ್​ ಸವಾಲಿಗೆ ಪ್ರತಿಯಾಗಿ ಕೆಎಲ್​ ರಾಹುಲ್​ (82) ಜತೆಗೆ ಕ್ವಿಂಟನ್​ ಡಿಕಾಕ್​ (54) ಮೊದಲ ವಿಕೆಟ್​ಗೆ 134 ರನ್​ ಪೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ನಿಕೋಲಸ್​ ಪೂರನ್​ (23) ಕೂಡ ರಾಹುಲ್​ಗೆ ಉತ್ತಮ ಬೆಂಬಲ ಒದಗಿಸಿದರು. ಆದರೆ ಗೆಲುವಿನಿಂದ 16 ರನ್​ ದೂರವಿದ್ದಾಗ ರಾಹುಲ್​ ಔಟಾದರು. ಅಂತಿಮವಾಗಿ ಲಖನೌ 19 ಓವರ್​ಗಳಲ್ಲಿ 2 ವಿಕೆಟ್​ಗೆ 180 ರನ್​ ಪೇರಿಸಿ ಜಯಿಸಿತು. ಸಿಎಸ್​ಕೆ ಬೌಲರ್​ಗಳು ಮತ್ತೊಮ್ಮೆ ತವರಿನಿಂದ ಹೊರಗೆ ನೀರಸ ಬೌಲಿಂಗ್​ ಪ್ರದರ್ಶಿಸಿದರು. ಉಭಯ ತಂಡಗಳು ಮೂರೇ ದಿನಗಳ ಅಂತರದಲ್ಲಿ ಮಂಗಳವಾರ ಚೆಪಾಕ್​ನಲ್ಲಿ ಮತ್ತೆ ಮುಖಾಮುಖಿ ಆಗಲಿವೆ.

    ನಮ್ಮ ಇನಿಂಗ್ಸ್​ ಉತ್ತಮ ಮುಕ್ತಾಯ ಕಂಡಿತು. ಆದರೆ ಪವರ್​ಪ್ಲೇ ನಂತರದಲ್ಲಿ 14-15ನೇ ಓವರ್​ ತನಕ ನಿರೀತ ಪ್ರಮಾಣದಲ್ಲಿ ರನ್​ ಬರಲಿಲ್ಲ. ನಿರಂತರವಾಗಿ ವಿಕೆಟ್​ ಕೂಡ ಉರುಳಿತು. ಇದರಿಂದ 10-15 ರನ್​ ಕೊರತೆ ಅನುಭವಿಸಿದೆವು ಎಂದು ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಹೇಳಿದರು.

    ಕೆಎಲ್​ ರಾಹುಲ್​ ಸಿಎಸ್​ಕೆ ವಿರುದ್ಧ 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 4ನೇ ಆಟಗಾರ ಎನಿಸಿದರು. ರೋಹಿತ್​ ಶರ್ಮ, ಡೇವಿಡ್​ ವಾರ್ನರ್​, ಶಿಖರ್​ ಧವನ್​ ಮೊದಲ ಮೂವರು. ಕೈರಾನ್​ ಪೊಲ್ಲಾರ್ಡ್​ 4 ಬಾರಿ ಗಳಿಸಿರುವುದು ಗರಿಷ್ಠ.

    ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದ ಸನ್‌ರೈಸರ್ಸ್‌ಗೆ ಸತತ 4ನೇ ಜಯ: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಹೈದರಾಬಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts