ಕೆಕೆಆರ್​ ವಿರುದ್ಧ 7 ವಿಕೆಟ್​ಗಳ ಸೋಲು; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

Faf Du Plessis
Published on

ಬೆಂಗಳೂರು: ಮಾರ್ಚ್​ 29ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಕಲ್ಕತ್ತಾ ನೈಟ್​ರೈಡರ್ಸ್​ ತಂಡವು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಲ್ಕತ್ತಾ ಆರ್​ಸಿಬಿ ತವರಿನಲ್ಲಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. 

ಕಲ್ಕತ್ತಾ ವಿರುದ್ಧ 182ರನ್​ ಗಳಿಸಿದ ಆರ್​ಸಿಬಿ ಕಳಪೆ ಬೌಲಿಂಗ್​ ಪ್ರದರ್ಶನದಿಂದಾಗಿ ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಯಿತು. ಅಂತಿಮವಾಗಿ ಕೆಕೆಆರ್​ ಈ ಗುರಿಯನ್ನು 16.5 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 186 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು. ಈ ಬಗ್ಗೆ ನಾಯಕ ಫಾಫ್​​ ಡು ಪ್ಲೆಸಿಸ್​ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಪಂದ್ಯದ ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ನಾಯಕ ಫಾಫ್​, ಮೊದಲ ಇನಿಂಗ್ಸ್‌ನಲ್ಲಿ ನಾವು ವಿಕೆಟ್ ಎರಡೂ ಕಡೆ ಇದೆ ಎಂದು ಭಾವಿಸಿದ್ದೆವು. ಬೌಲರ್​ಗಳು ಕಟ್ಟರ್‌, ಬ್ಯಾಕ್ ಆಫ್ ಲೆಂತ್ ಮೂಲಕ ಬೌಲಿಂಗ್ ಮಾಡಿದಾಗ ಅದನ್ನು ನೋಡಬಹುದಾಗಿದೆ. ನಮ್ಮ ಆಟಗಾರರು ನಿಜವಾಗಿಯೂ ಕಷ್ಟಪಟ್ಟರು. ಆದರೆ, ಇದು ಉತ್ತಮ ಸ್ಕೋರ್ ಎಂದುಕೊಂಡೆವು, ಸ್ವಲ್ಪ ಇಬ್ಬನಿ ಕೂಡ ಬಂದಿತ್ತು.

Faf Du Plesis

ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬ್ಯಾಟ್ ಮಾಡಲು ತುಂಬಾ ಕಷ್ಟಪಟ್ಟೆವು. ವಿರಾಟ್ ಕೊಹ್ಲಿಗೆ ಕೂಡ ವೇಗದ ಆಟವಾಡಲು ಸಾಧ್ಯವಾಗಲಿಲ್ಲ. ಅವರೂ ಕಷ್ಟಪಟ್ಟರು. ಆದರೆ, ಕೆಕೆಆರ್ ಪವರ್​ಪ್ಲೇನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ನರೈನ್ ಮತ್ತು ಸಾಲ್ಟ್​ ಬ್ಯಾಟಿಂಗ್​ ಮಾಡಿದ ರೀತಿ ಉತ್ತಮವಾಗಿತ್ತು. ಅವರು ನಮ್ಮ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ನಮಗೆ ಹೆಚ್ಚಿನ ಆಯ್ಕೆ ಇರಲಿಲ್ಲ. ವೈಶಾಕ್‌ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ನಿಧಾನಗತಿಯ ಚೆಂಡುಗಳನ್ನು ಬೌಲ್ ಮಾಡುವವರನ್ನು ಬಹುಶಃ ಈ ಪಿಚ್‌ನಲ್ಲಿ ಎದುರಿಸಲು ಅತ್ಯಂತ ಕಷ್ಟ ಎಂದು ನಾವು ಭಾವಿಸಿದ್ದೇವೆ. ರಸೆಲ್ ಅವರ 80% ಕಟ್ಟರ್‌ಗಳ ಮೂಲಕ ಬೌಲ್ ಮಾಡಿದರು. ನಾವು ಅದರಿಂದ ಕಲಿತು ಕೊಂಡಿದ್ದೇವೆ ಎಂದು ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net