

ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ಗೆ (IPL) ಸಂಬಂಧಿಸಿದಂತೆ ಮೆಗಾ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು 19 ಆಟಗಾರರನ್ನು ಖರೀದಿ ಮಾಡಿದ್ದು, 2025ರಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಮೂಲಕ ಹೊಸ ಅಧ್ಯಾಯ ಬರೆಯುವ ಮುನ್ಸೂಚನೆಯನ್ನು ನೀಡಿದೆ. ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ (Faf Du Plessis) ಈ ಬಾರಿ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದು, ಈಗ ಆರ್ಸಿಬಿಯನ್ನು (RCB) ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.
ಮೆಗಾ ಹರಾಜಿಗೂ ಮುನ್ನ ನಡೆದ ರಿಟೇನ್ ಪ್ರಕ್ರಿಯೆಯಲ್ಲಿ ಆರ್ಸಿಬಿ ತಂಡವು ವಿರಾಟ್ ಕೊಹ್ಲಿ (Virat Kohli) (21 ಕೋಟಿ). ರಜತ್ ಪಾಟಿದಾರ್ (Rajat Patidar) (11 ಕೋಟಿ), ಯಶ್ ದಯಾಳ್ (Yash Dayal) (5 ಕೋಟಿ) ಉಳಿಸಿಕೊಂಡಿತ್ತು. ಇನ್ನೂ ನವೆಂಬರ್ 24-25ರಂದು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 19 ಆಟಗಾರರನ್ನು ತಂಡ ಖರೀದಿಸಿದ್ದು, ಯಾರು ಸಹ ತಂಡದ ನಾಯಕರಾಗಿ ಈವರೆಗೂ ಗುರುತಿಸಿಕೊಂಡಿಲ್ಲ. ಇದೀಗ ನಾಯಕನ ಸ್ಥಾನಕ್ಕೆ ವಿರಾಟ್ ಕೊಹ್ಲಿ (Virat Kohli) ಹೆಸರು ಕೇಳಿ ಬರುತ್ತಿದ್ದು, ಇದಕ್ಕೆ ಅಭಿಮಾನಿಗಳು ಕಾರಣವನ್ನು ನೀಡಿ ವಿರಾಟ್ರನ್ನು ನಾಯಕನನ್ನಾಗಿ ಮಾಡುವಂತೆ ಫ್ರಾಂಚೈಸಿಗೆ ಬೇಡಿಕೆಯನ್ನು ಇರಿಸಿದ್ದಾರೆ.
ಆರ್ಸಿಬಿ ತಂಡದಲ್ಲಿ ಪ್ರಸ್ತುತ 22 ಆಟಗಾರರಿದ್ದು, ನಾಯಕತ್ವದ ಅನುಭವ ಹೊಂದಿರುವವರು ವಿರಾಟ್ ಕೊಹ್ಲಿ (Virat Kohli) ಮಾತ್ರ. ಹೀಗಾಗಿಯೇ ಆರ್ಸಿಬಿ ಫ್ರಾಂಚೈಸಿ ಕ್ಯಾಪ್ಟನ್ಸಿ ಸ್ಥಾನಕ್ಕೆ ವಿರಾಟ್ಗೆ ಮಣೆ ಹಾಕುವುಸು ಪಕ್ಕಾ ಆಗಿದೆ. ವಿರಾಟ್ಗೆ (Virat Kohli) ನಾಯಕನ ಪಟ್ಟ ನೀಡಲು ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್ಸಿಬಿ (RCB) ನಾಯಕನ ಸ್ಥಾನ ತುಂಬಬಲ್ಲ ಯಾವುದೇ ಆಟಗಾರನನ್ನು ಟಾರ್ಗೆಟ್ ಮಾಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಈಗಾಗಲೇ ಫ್ರಾಂಚೈಸಿ ಕೂಡ ವಿರಾಟ್ರನನ್ನು (Virat Kohli) ನಾಯಕನನ್ನಾಗಿ ಘೋಷಿಸುವುದು ಪಕ್ಕಾ ಆಗಿದ್ದು, ಈ ವಿಚಾರ ಅಧಿಕೃತವಾಗಬೇಕಿದೆ. 2025ರಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವುದು ಖಚಿತವಾಗಿದ್ದು, ಈ ಬಾರಿ ವಿರಾಟ್ ಕೊಹ್ಲಿ (Virat Kohli) ಸಾರಥ್ಯದಲ್ಲಿ ಆರ್ಸಿಬಿ ಪಡೆ ಕಣಕ್ಕಿಳಿಯಲಿದೆ. ಈ ಮೂಲಕ 17 ವರ್ಷಗಳ ಕಪ್ ಗೆಲ್ಲಬೇಕೆಂಬ ಕನಸನ್ನು ನನಸು ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.