ರಣವೀರ್​, ಶಾರುಖ್​ರನ್ನು ಹಿಂದಿಕ್ಕಿ ವಿಶೇಷ ಸಾಧನೆ ಮಾಡಿದ ವಿರಾಟ್​; ಆಕಾಶ ನೋಡುತ್ತಿದೆ ಕೊಹ್ಲಿಯ ಈ ಹೊಸ ದಾಖಲೆ

Virat kohli
Published on

ಮುಂಬೈ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್, ಚೇಸಿಂಗ್​ ಮಾಸ್ಟರ್​​ ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಫ್ಯಾನ್​ ಬೇಸ್​ ಹೊಂದಿದ್ದಾರೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿರಾಟ್​ ಕೊಹ್ಲಿ ಎಲ್ಲರಿಗೂ ತಿಳಿದಿರುವ ಚಿರಪರಿಚಿತ ವ್ಯಕ್ತಿ ಎಂದು ಹೇಳಬಹುದಾಗಿದೆ. ಇದೀಗ ವಿರಾಟ್​ ಕೊಹ್ಲಿ ಬಾಲಿವುಡ್​ನ ಸೂಪರ್​ಸ್ಟಾರ್​ಗಳಾದ ರಣವೀರ್​ ಸಿಂಗ್​ ಹಾಗೂ ಶಾರುಖ್​ ಖಾನ್​ರನ್ನು ಹಿಂದಿಕ್ಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬಾಲಿವುಡ್​ ತಾರೆಯರಾದ ಶಾರುಖ್​ ಖಾನ್​ ಹಾಗೂ ರಣವೀರ್​ ಸಿಂಗ್​ರನ್ನು ಹಿಂದಿಕ್ಕುವ ಮೂಲಕ ವಿರಾಟ್​ ದೇಶದ ನಂಬರ್ 1 ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಸೆಲಿಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರಲ್ಲಿ ಬಿಡುಗಡೆಯಾದ ಬ್ರ್ಯಾಂಡ್​ ವ್ಯಾಲ್ಯೂ ಪ್ರಕಾರ ಕೊಹ್ಲಿ ಅವರ ಪಾಪ್ಯುಲಾರಿಟಿ ಕಳೆದ ವರ್ಷಕ್ಕಿಂತ ಈ ವರ್ಷ 29 ರಷ್ಟು ಏರಿಕೆಯಾಗಿದ್ದು, $227.9 ಮಿಲಿಯನ್ ತಲುಪಿದೆ. ಈ ಮೂಲಕ ವಿರಾಟ್​ ದೇಶದ ನಂಬರ್ 1 ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಸೆಲಿಬ್ರಿಟಿ ಎಂದು ಖ್ಯಾತಿ ಪಡೆದಿದ್ದಾರೆ.

ವರ್ಷದಿಂ ವರ್ಷಕ್ಕೆ ಹೋಲಿಸಿದರೆ ಸೆಲೆಬ್ರಿಟಿಗಳ ಬ್ರ್ಯಾಂಡ್​ ವ್ಯಾಲ್ಯೂ ಶೇ 14.2ರಷ್ಟು ಹೆಚ್ಚಳವಾಗುತ್ತಿದ್ದು, ಇದು ಜಾಹೀರಾತು, ಡಿಜಿಟಲ್​ ಫ್ಲಾಟ್​​ಫಾರ್ಮ್​ಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡಿದೆ. ವಿರಾಟ್​ ಕೊಹ್ಲಿ ನಂತರದ ಸ್ಥಾನದಲ್ಲಿ ರಣವೀರ್​ ಕಪೂರ್ ($203.1 ಮಿಲಿಯನ್), ಶಾರುಖ್​ ಖಾನ್​ ($120.7 ಮಿಲಿಯನ್), ಅಕ್ಷಯ್​ ಕುಮಾರ್​ ($111.7 ಮಿಲಿಯನ್), ಆಲಿಯಾ ಭಟ್​ ($101.1 ಮಿಲಿಯನ್) ನಂತರ ಸ್ಥಾನಗಳಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net