Virat Kohli: ಪ್ರಸಕ್ತ ವರ್ಷದಲ್ಲಿ ನಡೆಯುತ್ತಿರುವ ಐಪಿಎಲ್ ಆವೃತ್ತಿ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕ ಮುಂದೂಡಿಕೆ ಆಗಿದೆ. ಐಪಿಎಲ್ 18ನೇ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಆಡಿರುವ 11 ಪಂದ್ಯಗಳಲ್ಲಿ ಬರೋಬ್ಬರಿ 505 ರನ್ ಗಳಿಸಿದ್ದಾರೆ. ಆರು ಸ್ಫೋಟಕ ಅರ್ಧಶತಕ ಗಳಿಸಿರುವ ಕೊಹ್ಲಿ, ರನ್ ಚೇಸಿಂಗ್ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ದಾಖಲೆ ಜೊತೆ ಜೊತೆಯಲ್ಲೇ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ಕೊಹ್ಲಿ ಸದ್ಯ ತಮ್ಮ ದಿಢೀರ್ ನಿರ್ಧಾರದಿಂದ ಬಿಸಿಸಿಐಗೆ ಆಘಾತ ತಂದೊಡ್ಡಿದ್ದಾರೆ.

ಇದನ್ನೂ ಓದಿ: ಐಪಿಎಲ್ಗೆ ಅಡಚಣೆ ಇದೇ ಮೊದಲಲ್ಲ; 2021ರಲ್ಲೂ ಅರ್ಧದಲ್ಲೇ ಸ್ಥಗಿತಗೊಂಡಿತ್ತು!
ಇತ್ತೀಚೆಗಷ್ಟೇ ಐಪಿಎಲ್ ಟೂರ್ನಿ ಮಧ್ಯೆಯೇ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಕ್ಯಾಪ್ಟನ್ ರೋಹಿತ್ ಶರ್ಮ ನಿವೃತ್ತಿ ಘೋಷಿಸಿದರು. ಈಗ ಅವರ ಹಾದಿಯಲ್ಲೇ ಸಾಗುವ ಕಟು ನಿರ್ಧಾರ ಮಾಡಿರುವ ವಿರಾಟ್ ಕೊಹ್ಲಿ, ತಾವು ಕೂಡ ಟೆಸ್ಟ್ನಿಂದ ನಿವೃತ್ತಿ ಪಡೆಯುವುದಾಗಿ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಸಲಿಗೆ ರೋಹಿತ್ರಂತೆಯೇ ಕೊಹ್ಲಿ ಕೂಡ ಐಪಿಎಲ್ ನಡುವೆಯೇ ಟೆಸ್ಟ್ಗೆ ನಿವೃತ್ತಿ ಘೋಷಿಸುತ್ತಾರಾ? ಇದಕ್ಕೆ ಬಿಸಿಸಿಐ ಒಪ್ಪಿಗೆ ಸೂಚಿಸಲಿದೆಯೇ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).
1 ವಾರ ಐಪಿಎಲ್ ಮುಂದೂಡಿಕೆ
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿರುವ ಕಾರಣ, ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಒಂದು ವಾರ ರದ್ದುಗೊಳಿಸಿದೆ. ಒಂದು ವಾರದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಪಂದ್ಯಗಳನ್ನು ಆಡಿಸುವ ಕುರಿತು ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ.