ಬೆಂಗಳೂರು: ಐಪಿಎಲ್ ಟೂರ್ನಿ ಮೊಟಕುಗೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2021ರಲ್ಲಿ ಕರೊನಾ ಸಮಯದಲ್ಲೂ ಐಪಿಎಲ್ 14ನೇ ಆವೃತ್ತಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಆಗ ಟೂರ್ನಿಯ ಬಯೋಬಬಲ್ನಲ್ಲಿ ಹೆಚ್ಚಿನ ಆಟಗಾರರನ್ನು ಕರೊನಾ ಸೋಂಕು ಕಾಡಿದ್ದರಿಂದ ಟೂರ್ನಿಯ ಮೊದಲ 29 ಪಂದ್ಯಗಳ ಬಳಿಕ ಸ್ಥಗಿತಗೊಂಡಿತ್ತು. ನಂತರದಲ್ಲಿ ಸೆಪ್ಟೆಂಬರ್ನಲ್ಲಿ ಯುಎಇಯಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನು ಮರುನಿಗದಿಪಡಿಸಲಾಗಿತ್ತು.

ಇದರ ಹೊರತಾಗಿ 2020ರ ಆವೃತ್ತಿ ಕರೊನಾದಿಂದಾಗಿ ಸಂಪೂರ್ಣ ಮುಂದೂಡಿಕೆಯಾಗಿ ಸೆಪ್ಟೆಂಬರ್&ಅಕ್ಟೋಬರ್ನಲ್ಲಿ ಯುಎಇಯಲ್ಲಿ ಆಯೋಜನೆಗೊಂಡಿದ್ದರೆ, 2014ರಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಟೂರ್ನಿಯ ಮೊದಲಾರ್ಧದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಅದಕ್ಕೆ ಮುನ್ನ 2009ರಲ್ಲಿ ಇದೇ ಕಾರಣಕ್ಕೆ ಸಂಪೂರ್ಣ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು.
TAGGED:Cricket