ದಿಢೀರ್​ ದಕ್ಷಿಣ ಆಫ್ರಿಕಾ ಬಿಟ್ಟು ತವರಿಗೆ ಮರಳಿದ ವಿರಾಟ್​! ಕಾರಣ ತಿಳಿಸಿದ ಬಿಸಿಸಿಐ

ವಿಜಯವಾಣಿ - 2023-12-22T195433.198
Published on

ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದೀಗ ಡಿಸೆಂಬರ್ 26 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿಯಿಂದ ದಿಢೀರ್​ ಹೊರ ಬಂದಿದ್ದು, ಭಾರತಕ್ಕೆ ವಾಪಾಸ್​ ಆಗಿದ್ದಾರೆ. ಸದ್ಯ ಈ ಒಂದು ಸುದ್ದಿ ತಿಳಿದ ವಿರಾಟ್​ ಅಭಿಮಾನಿಗಳು ಹಾಗೂ ಕ್ರಿಕೆಟ್​ ಪ್ರಿಯರು ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ ಹಿಂತಿರುಗಲು ಕಾರಣವೇನು ಎಂಬುದನ್ನು ಇದೀಗ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ತಮ್ಮ ವೈಯಕ್ತಿಕ ಕಾರಣಗಳಿಗಾಗಿ ದಕ್ಷಿಣ ಆಫ್ರಿಕಾದಿಂದ ವಿರಾಟ್​ ತವರಿಗೆ ಹಿಂತಿರುಗಿದ್ದಾರೆ. ಆದರೆ ಸೆಂಚುರಿಯನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಮುಂಚಿತವಾಗಿ ಕೊಹ್ಲಿ ಟೆಸ್ಟ್ ತಂಡವನ್ನು ಮತ್ತೆ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮಧ್ಯೆ ರುತುರಾಜ್ ಗಾಯಕ್ವಾಡ್ ಬೆರಳಿಗೆ ಗಾಯವಾಗಿದ್ದು, ಎರಡು ಟೆಸ್ಟ್‌ಗಳ ಸರಣಿಯಿಂದ ಹೊರಗುಳಿದಿದ್ದಾರೆ.

ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಗಾಯಕ್ವಾಡ್ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಕಾರಣದಿಂದ ಇದೀಗ ಅವರು ಎರಡು ಟೆಸ್ಟ್​ಗಳಿಂದ ಹೊರಗುಳಿದಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾದ ಟೆಸ್ಟ್​ ಪ್ರವಾಸದಲ್ಲಿರುವ ಭಾರತ ಎ ತಂಡದ ಭಾಗವಾಗಿರುವ ಅಭಿಮನ್ಯು ಈಶ್ವರನ್, ಗಾಯಕ್ವಾಡ್ ಬದಲಿಗೆ ಮೀಸಲು ಆರಂಭಿಕ ಆಟಗಾರನಾಗಿ ಕಣ್ಣಕ್ಕಿಳಿಯಲ್ಲಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net