More

    ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರ ದಿಟ್ಟ ಹೆಜ್ಜೆ.. ಅಗ್ಗವಾಗಲಿದೆಯೇ ಅಡುಗೆ ಎಣ್ಣೆ?

    ನವದೆಹಲಿ: ಕೇಂದ್ರ ಸರ್ಕಾರ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಶೀಘ್ರದಲ್ಲೇ ಖಾದ್ಯ ತೈಲಗಳ ಬೆಲೆಗಳು ಕಡಿಮೆಯಾಗಲಿದೆ.

    ಇದನ್ನೂ ಓದಿ: ಬಿಎಸ್​ಇ ಸೂಚ್ಯಂಕ ಶೇ. 0.34 ಏರಿಕೆ: ಯಾವ ಷೇರುಗಳಿಗಿದೆ ಬೇಡಿಕೆ? 3 ದಿನ ವಹಿವಾಟು ಇಲ್ಲವೇಕೆ?
    ಸರ್ಕಾರ ಪ್ರಮುಖ ಖಾದ್ಯ ತೈಲಗಳ ಆಮದು ಸುಂಕ(ಕಸ್ಟಮ್​ ಟ್ಯಾಕ್ಸ್​)ವನ್ನು ಕಡಿಮೆ ಮಾಡಿ ಒಂದು ವರ್ಷದವರೆಗೆ ವಿಸ್ತರಿಸಿದೆ. ಈ ನಿರ್ಧಾರದಿಂದ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಲಿದೆ ಎಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ದಿಕ್ಕು ತಪ್ಪಿರುವ ಸಾಮಾನ್ಯ ಜನರ ಅಡಡುಗೆ ಮನೆ ಬಜೆಟ್ ಮತ್ತೆ ಹಳಿಗೆ ಬರುತ್ತದೆ.

    ಕಡಿಮೆಯಾದ ಆಮದು ಸುಂಕವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಮಾರ್ಚ್ 2025 ರವರೆಗೆ ವಿಸ್ತರಿಸಿದೆ. ಇದರರ್ಥ ಈಗ ಮಾರ್ಚ್ 2025 ರವರೆಗೆ ವ್ಯಾಪಾರಿಗಳು ಕಡಿಮೆ ಸುಂಕದಲ್ಲಿ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಜೂನ್ ನಲ್ಲಿ ಕೇಂದ್ರ ಸರ್ಕಾರ ಖಾದ್ಯ ತೈಲಗಳ ಆಮದು ಸುಂಕವನ್ನು ಕಡಿತಗೊಳಿಸಿತ್ತು. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಸರ್ಕಾರವು ಶೇ.17.5 ರಿಂದ ಶೇ.12.5 ​​ಕ್ಕೆ ಇಳಿಸಿತ್ತು. ಹಣದುಬ್ಬರದಲ್ಲಿ ಆಮದು ಸುಂಕವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಗ್ರಹಿಸಿದೆ. ಸುಂಕ ಕಡಿಮೆಯಾದರೆ ಬೆಲೆಯೂ ಕುಸಿಯುತ್ತದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
    ಸಾಸಿವೆ ಉತ್ಪಾದನೆ ಹೆಚ್ಚಳ: ಖಾದ್ಯ ತೈಲದ ವಿಶ್ವದ ಅತಿದೊಡ್ಡ ಗ್ರಾಹಕ ಭಾರತ. ಇದೇ ಸಮಯದಲ್ಲಿ ಇದು ಸಸ್ಯಜನ್ಯ ಎಣ್ಣೆಯ ಅತಿದೊಡ್ಡ ಆಮದುದಾರ ದೇಶವೂ ಆಗಿದೆ.ಶೇ. 60 ರಷ್ಟು ತೈಲವನ್ನು ಆಮದು ಮೂಲಕ ಪಡೆಯಬೇಕಿದೆ. ಇದರಲ್ಲಿ ಪಾಮ್ ಆಯಿಲ್​ ಸಿಂಹಪಾಲು ಪಡೆದಿದ್ದು, ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಮುಖ್ಯವಾಗಿ ಸಾಸಿವೆ, ತಾಳೆ, ಸೋಯಾಬೀನ್, ನೆಲಗಡಲೆ ಮತ್ತು ಸೂರ್ಯಕಾಂತಿ ಬೆಳೆಯಲಾಗುತ್ತದೆ. ಈ ವರ್ಷ, ದೇಶದಲ್ಲಿ ಸಾಸಿವೆ ಪ್ರದೇಶದಲ್ಲಿ ಹೆಚ್ಚಳ ಕಂಡುಬಂದಿದೆ.

    ಹಣದುಬ್ಬರ 3 ತಿಂಗಳಲ್ಲೇ ಗರಿಷ್ಠ: ನವೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಇದಕ್ಕೆ ಪ್ರಮುಖ ಕಾರಣ. ಚಿಲ್ಲರೆ ಹಣದುಬ್ಬರವು ನವೆಂಬರ್‌ನಲ್ಲಿ ಶೇಕಡಾ 5.55 ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ, ಅಕ್ಟೋಬರ್​ನಲ್ಲಿ, ಗ್ರಾಹಕ ಬೆಲೆ ಸೂಚ್ಯಂಕವು ಶೇ.4.87ರಲ್ಲಿ ದಾಖಲಾಗಿದೆ.

    ಆಮದು ಸುಂಕ ತೆಗೆದುಹಾಕಲಾಗಿದೆ:  ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇತ್ತೀಚೆಗಷ್ಟೇ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿತ್ತು. ಇದಾದ ನಂತರ ಸರ್ಕಾರ ಹಳದಿ ಬಟಾಣಿ ಆಮದನ್ನು ಮುಕ್ತಗೊಳಿಸಿತು. ಈ ನಿರ್ಧಾರದಿಂದ ಬೇಳೆಕಾಳುಗಳ ಬೆಲೆ ಇಳಿಕೆಯಾಗಲಿದೆ ಎಂಬುದು ಸರ್ಕಾರದ ಆಶಯ. ಇದರಿಂದ ಜನ ಸಾಮಾನ್ಯರಿಗೆ ನೆಮ್ಮದಿ ಸಿಗಲಿದೆ.

    ಸಾವು ಯಾವಾಗ ಎಂದು ಹೇಳುವ ಎಐ ಸಾಧನ ಬಂದೇ ಬಿಟ್ಟಿತು..ಇದು ಹೇಗೆ ಕೆಲಸ ಮಾಡುತ್ತದೆ? ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts