More

    ಬಿಎಸ್​ಇ ಸೂಚ್ಯಂಕ ಶೇ. 0.34 ಏರಿಕೆ: ಯಾವ ಷೇರುಗಳಿಗಿದೆ ಬೇಡಿಕೆ? 3 ದಿನ ವಹಿವಾಟು ಇಲ್ಲವೇಕೆ?

    ಮುಂಬೈ: ಐಟಿ ಷೇರುಗಳಲ್ಲಿನ ಖರೀದಿ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿನ ಏರಿಕೆ ಪ್ರವೃತ್ತಿಗಳ ಹಿನ್ನೆಲೆಯಲ್ಲಿ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಸತತ ಎರಡನೇ ದಿನ ಲಾಭದಲ್ಲಿ ವಹಿವಾಟು ನಡೆಸಿದವು.

    30-ಷೇರು ಬಿಎಸ್‌ಇ ಸೂಚ್ಯಂಕವು ಶೇಕಡಾ 241.86 ಅಂಕ ಅಥವಾ 0.34 ಶೇಕಡಾ ಏರಿಕೆಯಾಗಿ 71,106.96 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 394.45 ಅಂಕ ಜಿಗಿದು 71,259.55 ಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 94.35 ಅಂಕ ಅಥವಾ 0.44 ರಷ್ಟು ಏರಿಕೆಯಾಗಿ 21,349.40 ಕ್ಕೆ ಮುಟ್ಟಿತು.

    ವಿಪ್ರೋ ಷೇರುಗಳು ಶುಕ್ರವಾರ ಒಂದೇ ದಿನದಲ್ಲಿ ಶೇಕಡಾ 6ರಷ್ಟು ಏರಿಕೆ ಕಂಡವು. ಎಚ್​ಸಿಎಲ್​ಟೆಕ್ನಾಲಜೀಸ್, ಟಾಟಾ ಮೋಟಾರ್ಸ್, ಮಾರುತಿ, ಟಾಟಾ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಲಾರ್ಸನ್ & ಟೂಬ್ರೋ ಮತ್ತು JSW ಸ್ಟೀಲ್ ಮುಂತಾದ ಕಂಪನಿಗಳ ಷೇರುಗಳು ಹೆಚ್ಚಳ ಕಂಡವು.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಕುಸಿತ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ ಲಾಭ ಕಂಡರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಸಿಯೋಲ್ ಮಾರುಕಟ್ಟೆಗಳು ಕುಸಿತ ದಾಖಲಿಸಿದವು.

    ಐರೋಪ್ಯ ಮಾರುಕಟ್ಟೆಗಳು ಮಿಶ್ರ ನೋಟ ಕಂಡುಬಂದಿತು. ಗುರುವಾರ ಅಮೆರಿಕದ ಮಾರುಕಟ್ಟೆಗಳಲ್ಲಿ ಏರಿಕೆ ಪ್ರವೃತ್ತಿ ಗೋಚರಿಸಿತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,636.19 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಗುರುವಾರ 358.79 ಅಂಕ ಅಥವಾ 0.51 ಶೇಕಡಾ ಏರಿಕೆ ಕಂಡು 70,865.10 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 104.90 ಅಂಕ ಏರಿ 21,255.05 ಕ್ಕೆ ತಲುಪಿತ್ತು.

    ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇನ್ನು ಮೂರು ದಿನ ವಹಿವಾಟು ಇರುವುದಿಲ್ಲ. ಶನಿವಾರ ಹಾಗೂ ಭಾನುವಾರದಂದು ಷೇರು ಮಾರುಕಟ್ಟೆಗೆ ಎಂದಿನಂತೆ ಕಾರ್ಯನಿರ್ವಹಿಸುವುದಿಲ್ಲ. ಅದರ ಮರುದಿನವಾದ ಸೋಮವಾರ (ಡಿ. 25) ಕ್ರಿಸ್ಮಸ್​ ಹಬ್ಬದ ರಜೆ ಇರುತ್ತದೆ. ಹೀಗಾಗಿ, ಮೂರು ದಿನಗಳ ವಹಿವಾಟು ಇರುವುದಿಲ್ಲ.

    2023ರಲ್ಲಿ ಈ ವರ್ಗದ ಮ್ಯೂಚುವಲ್ ಫಂಡ್​ಗಳಲ್ಲಿ ದೊರೆತ ಸರಾಸರಿ ಗಳಿಕೆ ಶೇಕಡಾ 32.23; ಮುಂದಿನ ವರ್ಷವೂ ಇದೇ ರೀತಿ ಲಾಭ ಸಿಗುವುದೇ?

    ಲೋಕಸಭೆ ಚೇಂಬರ್​ಗೆ ನುಗ್ಗಿದವರಿಗೆ ಪಾಸ್​ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ದಾಖಲು

    ಕಮರ್ಷಿಯಲ್​ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ: 39.50 ರೂಪಾಯಿ ಕಡಿತ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts