ರೈಲಿಗಾಗಿ ಕಾದುಕುಳಿತ ಕಿಂಗ್​ ಕೊಹ್ಲಿ; ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಗೊಂದಲ

Untitled-design-2024-08-23T180704.744
Published on

ಟೀಂ ಇಂಡಿಯಾದ ಬ್ಯಾಟಿಂಗ್​ ಮಾಂತ್ರಿಕ ವಿರಾಟ್​ ಕೊಯ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತಿರುವುದು ಗೊತ್ತೆ ಇದೆ. ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಡಲು ಇಚ್ಛಿಸುವ ಕೊಯ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳೊಂದಿಗೆ ಲಂಡನ್​ನಲ್ಲಿದ್ದಾರೆ. ಕೊಯ್ಲಿ ಕುಟುಂಬ ಶಾಶ್ವತವಾಗಿ ಲಂಡನ್​ಗೆ ಶಿಫ್ಟ್ ಆಗುತ್ತಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಸೆಲಿಬ್ರಿಟಿ ದಂಪತಿ ಲಂಡನ್​​ ನಗರದ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುತ್ತಿರುವುದು, ರಸ್ತೆ ಬದಿಗಳಲ್ಲಿ ಕೊಂಡುಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಇದೀಗ ವಿರಾಟ್​ ಕೊಯ್ಲಿ ವಿಡಿಯೋವೊಂದ ಹೊರಬಿದಿದ್ದು ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಆ ವಿಡಿಯೋ ನೋಡಿದ ಅಭಿಮಾನಿಗಳು ಇದನ್ನು ಎಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಿಗೆ ಹೊರಟಿದ್ದಾರೆ ಕಿಂಗ್ ಕೊಯ್ಲಿ ಎಂದು ಪ್ರಶ್ನಿಕೊಳ್ಳುತ್ತಿದ್ದಾರೆ. ಕೆಲವರು ಇದು ಲಂಡನ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂದು ಊಹಿಸುತ್ತಿದ್ದಾರೆ.

ವೈರಲ್​ ಆಗುತ್ತಿರುವ ವಿಡಿಯೋ ಕೆಲವು ದಿನಗಳ ಹಳೆಯದು ಎನ್ನಲಾಗುತ್ತಿದೆ. ವಿಡಿಯೋದಲ್ಲಿ ವಿರಾಟ್​ ಕೊಯ್ಲಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ. ರೈಲ್ವೆ ನಿಲ್ದಾಣದಲ್ಲಿ ಒಬ್ಬರ ಜತೆ ಕಾಣಿಸಿಕೊಂಡಿರುವ ಅವರು ಟ್ರೈನಿಗಾಗಿ ಕಾಯುತ್ತಿದ್ದಾರೆ. ರೈಲು ಬಂದ ತಕ್ಷಣ ಅಲ್ಲಿಂದ ತೆರಳುವುದನ್ನು ಕಾಣಬಹುದಾಗಿದೆ.

ಇತ್ತೀಚೆಗೆ ಬಿಸಿಸಿಐ ಪ್ರಕಟಿಸಿದ ದುಲೀಪ್ ಟ್ರೋಫಿ ತಂಡದಲ್ಲಿ ಸ್ಟಾರ್ ಬ್ಯಾಟರ್​ ವಿರಾಟ್​ ಕೊಯ್ಲಿ ಜತೆಗೆ ರೋಹಿತ್​​ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿಲ್ಲ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net