T20 ವಿಶ್ವಕಪ್​: ವಿರಾಟ್ 2 ಬಾರಿ ಟಾಪ್​​ ರನ್ ಸ್ಕೋರರ್; ಈ ದಾಖಲೆ ಮಾಡಿದ ಮೊದಲ ಬ್ಯಾಟ್ಸ್​ಮನ್​ ಕೊಹ್ಲಿ

Virat Kohli
Published on

ನವದೆಹಲಿ: 2022ರ ಟಿ-20 ವಿಶ್ವಕಪ್ ಜಯಿಸುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ನಿನ್ನೆಯಷ್ಟೇ ಮಕ್ತಾಯಕಂಡ ಚುಟುಕು ಕ್ರಿಕೆಟ್ ಸಮರದಲ್ಲಿ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಈ ವಿಶ್ವಕಪ್​ನಲ್ಲಿ 6 ಪಂದ್ಯಗಳನ್ನಾಡಿರುವ ಕೊಹ್ಲಿ 98.66ರ ಸರಾಸರಿಯಲ್ಲಿ 296 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಇಡೀ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದವರಲ್ಲಿ ಕೊಹ್ಲಿಗೆ ಮೊದಲ ಸ್ಥಾನ. ಈ ಮೂಲಕ ಎರಡು ಬಾರಿ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಕೆಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿಯದ್ದು.

ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಎದುರಿಸಿತ್ತು. ಇನ್ನೇನು ಈ ಪಂದ್ಯವನ್ನು ಭಾರತ ಸೋತೇ ಬಿಡುತ್ತದೆ ಎಂಬ ಸಂದರ್ಭದಲ್ಲಿ ಪಂದ್ಯದ ಗತಿ ಬದಲಿಸಿದ್ದು ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್. ಈ ಪಂದ್ಯದದ ಗೆಲುವಿನಲ್ಲಿ ಕೊಹ್ಲಿಯ ಇನ್ನಿಂಗ್ಸ್​ ನಿರ್ಣಾಯಕವಾಗಿತ್ತು. 82 ರನ್​ ಸಿಡಿಸಿ ಪಾಕಿಸ್ತಾನದ ಗೆಲುವನ್ನು ತನ್ನತ್ತು ಎಳೆದುಕೊಂಡರು. ಈ ಪಂದ್ಯದಲ್ಲಿ 82 ರನ್ ಗಳಿಸಿದ್ದು, ಇಡೀ ಟೂರ್ನಿಯಲ್ಲಿ ಕೊಹ್ಲಿಯ ಗರಿಷ್ಠ ರನ್. ಒಟ್ಟು 6 ಪಂದ್ಯಗಳಲ್ಲಿ 4 ಅರ್ಧಶತಕ ಸಿಡಿಸಿ ಮಿಂಚಿದರು.

ವಿರಾಟ್ ಕೊಹ್ಲಿ 2014ರ ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿ, ಬ್ಯಾಟಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅಂದು ಆರು ಇನ್ನಿಂಗ್ಸ್​​ನಲ್ಲಿ 106.33ರ ಸರಾಸರಿಯಲ್ಲಿ ಕೊಹ್ಲಿ ಗಳಿಸಿದ್ದು 319 ರನ್. 2014ರಲ್ಲೂ ನಾಲ್ಕು ಅರ್ಧಶತಕ ಕೊಹ್ಲಿ ಬ್ಯಾಟಿಂಗ್ ಸಿಡಿದಿದ್ದವು.

ವಿರಾಟ್ ಕೊಹ್ಲಿ ಒಟ್ಟು 1141 ರನ್ ಕಲೆ ಹಾಕಿ, ಟಿ-20 ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್ ಗಳಿಕೆ ಮಾಡಿದ ಆಟಗಾಋ ಎನಿಸಿಕೊಂಡಿದ್ದಾರೆ. ಇದುವರೆಗೂ 27 ಟಿ-20 ವಿಶ್ವಕಪ್ ಪಂದ್ಯಗಳನ್ನಾಡಿರುವ ವಿರಾಟ್, 14 ಅರ್ಧ ಶತಕ ಸಿಡಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net