

RCB vs MI: ಇಂದು (ಏ.07) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ, ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದೆ.
ಅಂತೆಯೇ ಮೊದಲು ಬ್ಯಾಟ್ ಮಾಡುತ್ತಿರುವ ಆರ್ಸಿಬಿಗೆ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ವಿಕೆಟ್ ಶೀಘ್ರವೇ ಪತನಗೊಂಡರೆ, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಮೈದಾನದ ಸುತ್ತಲ್ಲೇ ಸ್ಫೋಟಕ ಬ್ಯಾಟಿಂಗ್ ದಾಳಿ ನಡೆಸಿದ್ದಾರೆ. ಸಾಲ್ಟ್ ಪೆವಿಲಿಯನ್ನತ್ತ ಮುಖಮಾಡಿದ ಬೆನ್ನಲ್ಲೇ ಕಣಕ್ಕಿಳಿದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಕೂಡ ಸ್ಫೋಟಕ ಇನ್ನಿಂಗ್ಸ್ ಪ್ರಾರಂಭಿಸಿದರು.
ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಜತೆಯಾಟ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಲ್ಲದೇ ತಂಡದ ಮೊತ್ತವನ್ನು ಕ್ರಮೇಣವಾಗಿ ಹೆಚ್ಚಿಸಿದೆ.
ಫಿಲ್ ಸಾಲ್ಟ್ (2 ಎಸೆತ, 4 ರನ್)
ವಿರಾಟ್ ಕೊಹ್ಲಿ (30 ಎಸೆತ, 52* ರನ್)
ದೇವದತ್ತ ಪಡಿಕ್ಕಲ್ (22 ಎಸೆತ, 37 ರನ್)