ಕೊಹ್ಲಿ ತಬ್ಬಿಕೊಂಡು ಜೈಲು ಪಾಲಾಗಿದ್ದ ಅಭಿಮಾನಿಗೆ ಸಿಕ್ತು ಭರ್ಜರಿ ಸ್ವಾಗತ; ವಿಡಿಯೋ ವೈರಲ್

Kohli Fan
Published on

ನವದೆಹಲಿ: ಇಲ್ಲಿರುವ ಹೋಳ್ಕರ್​ ಕ್ರೀಡಾಂಗಣದಲ್ಲಿ ಭಾನುವಾರ (ಜನವರಿ 14) ನಡೆದ ಎರಡನೇ ಟಿ-20 ಪಂದ್ಯದ ವೇಳೆ ನಡೆದ ವಿಚಿತ್ರ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ವಿರಾಟ್​ ಕೊಹ್ಲಿ ಫೀಲ್ಡಿಂಗ್​​ ಮಾಡುತ್ತಿದ್ದ ವೇಳೆ ಮೈದಾನದ ಭದ್ರತೆಯನ್ನು ಮುರಿದು ಮೈದಾನಕ್ಕೆ ನುಗ್ಗಿ ಅಪ್ಪಿಕೊಂಡಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದ ಮೈದಾನದ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು.

ಬಳಿಕ ಮಾತನಾಡಿದ್ದ ವ್ಯಕ್ತಿ ತನಗೆ ಕೊಹ್ಲಿ ಕಂಡರೆ ತುಂಬಾ ಇಷ್ಟ ಆ ಕಾರಣಕ್ಕೆ ನಾನು ಮೈದಾನದ ಭದ್ರತೆಯನ್ನು ಲೆಕ್ಕಿಸದೆ ಅವರನ್ನು ಅಪ್ಪಿಕೊಳ್ಳುವ ಧೈರ್ಯ ಮಾಡಿದ್ದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು ಮತ್ತು ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆಗೊಂಡಿದ್ದ ಯುವಕ ತನ್ನ ಸ್ವಗ್ರಾಮಕ್ಕೆ ತೆರಳಿದ್ದು, ಆತನಿಗೆ ಅದ್ದೂರಿ ಸ್ವಾಗತ ದೊರೆತಿದೆ. ಕೊಹ್ಲಿಯ ಅಭಿಮಾನಿಗೆ ಸ್ವಾಗತ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸ್ವಾಗತಿಸಲು ಸಾಕಷ್ಟು ಮಂದಿ ಆಗಮಿಸಿರುವುದನ್ನು ನಾವು ಕಾಣಬಹುದಾಗಿದೆ. ಅವರಲ್ಲಿ ಒಬ್ಬರು ಆತನಿಗೆ ಹೂವಿನ ಹಾರವನ್ನು ಹಾಕುವುದನ್ನು ಕಾಣಬಹುದಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಭರದಲ್ಲಿ ಯುವಕ ಈ ರೀತಿ ಮಾಡಿದ್ದಾನೆ. ಆತನಿಂದ ಮೆಚ್ಚಳಿಕೆ ಬರೆಸಿಕೊಳ್ಳಲಾಗಿದ್ದು, ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net