VIDEO/ವಿರಾಟ್​​ ಕೊಹ್ಲಿ ಮೇಣದ ಪ್ರತಿಮೆಗೆ ಲಿಪ್​ ಕಿಸ್​​ ಕೊಟ್ಟ ಮಹಿಳಾ ಅಭಿಮಾನಿ!

Virat Kohli Fan
Published on

ನವದೆಹಲಿ: ಅಭಿಮಾನಿಗಳ ವಿಚಾರವಾಗಿಯೇ ಟೀಮ್​ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಲಂಡನ್​​ನ ಮ್ಯೂಸಿಯಂವೊಂದರಲ್ಲಿರುವ ವಿರಾಟ್​​ ಮೇಣದ ಪ್ರತಿಮೆಗೆ ಯುವತಿಯೊಬ್ಬಳು ಲಿಪ್​ ಕಿಸ್​​ ಕೊಟ್ಟಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಮೇಣದ ಪ್ರತಿಮೆ ಇದೆ. ಮಹಿಳಾ ಅಭಿಮಾನಿ ವಿರಾಟ್​ ಪ್ರತಿಮೆಗೆ ಲಿಪ್​ ಕಿಸ್ ಕೊಟ್ಟಿರುವ ವಿಡಿಯೋವನ್ನು ತಮ್ಮ ಸೋಶಿಯಲ್​​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಹೆಸರಿಗೆ ಟ್ಯಾಗ್​ ಮಾಡಿದ್ದಾರೆ.

ವಿರಾಟ್‌ ಕೊಹ್ಲಿ ಪ್ರತಿಮೆಗೆ ಮಾದಕವಾಗಿ ಲಿಪ್‌ ಕಿಸ್‌ ಕೊಡುತ್ತಿರುವ ಯುವತಿಗೆ ಹುಚ್ಚು ಹಿಡಿದಿದೆ . ಈ ಮಹಿಳೆಯ ವರ್ತನೆ ಅನುಚಿತವಾಗಿದೆ ಎಂದು ಟ್ವಿಟರ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net