More

    ‘ಮೋಯೆ ಮೋಯೆ’ ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ – ವಿಡಿಯೋ ವೈರಲ್..

    ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಮೊದಲ ಓವರ್​ನಲ್ಲೂ ಟೈ ಕಂಡ ನಂತರ ಮೈದಾನದಲ್ಲಿ ಡಿಜೆಯಲ್ಲಿ ಮೊಯೆ ಮೊಯೆ ಹಾಡಲು ಪ್ಲೇ ಮಾಡಲಾಗಿತ್ತು. ಈ ವೇಳೆ ವಿರಾಟ್ ಕೊಹ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಗಮನಸೆಳೆದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಪಂದ್ಯಕ್ಕೆ ತಿರುವು ಕೊಟ್ಟ ಸೂಪರ್​ಮ್ಯಾನ್​ ಕೊಹ್ಲಿ ಫೀಲ್ಡಿಂಗ್​: ವಿರಾಟ್​ ಜಿಗಿತ ಬೂಮ್ರಾ ಬೌಲಿಂಗ್​ ಮ್ಯಾಚಿಂಗ್​!

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿತು. 2ನೇ ಸೂಪರ್​ ಓವರ್​ನಲ್ಲಿ 10 ರನ್​ಗಳಿಂದ ಗೆದ್ದ ರೋಹಿತ್​ ಪಡೆ 3-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಡಿತು. ಪಂದ್ಯ ಟೈ ಆದ ಬಳಿಕ ಸೂಪರ್​ಓವರ್​ಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಮೊಯೆ ಮೊಯೆ ಹಾಡಿಗೆ ವಿರಾಟ್ ಕೊಹ್ಲಿ ಸಿಗ್ನೇಚರ್​ಸ್ಪೆಪ್ಸ್ ಹಾಕಿದರು.

    2 ಬಾರಿ ಸೂಪರ್​ ಓವರ್: ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್​ಗಳ ಬೃಹತ್ ಮೊತ್ತ ಪೇರಿಸಿತು. ರೋಹಿತ್​ ಶರ್ಮಾ ಮತ್ತು ರಿಂಕು ಸಿಂಗ್​ ಜೋಡಿ ಐದನೇ ವಿಕೆಟ್​ಗೆ 190 ರನ್​ಗಳ ಜೊತೆಯಾಟವಾಡಿ ಅಫ್ಘನ್​ಎದುರು ದೊಡ್ಡ ಮೊತ್ತ ಸಿಡಿಸಲು ಸಾಧ್ಯವಾಯಿತು. ಆದರೆ ಈ ಗುರಿ ಬೆನ್ನಟ್ಟಿದ ಅಫ್ಘನ್, 6 ವಿಕೆಟ್ ನಷ್ಟಕ್ಕೆ ಅಷ್ಟೇ ರನ್​ಗಳನ್ನು ಗಳಿಸಿ ಪಂದ್ಯವನ್ನು ಟೈಗೊಳಿಸಿತು.
    ಮೊದಲ ಸೂಪರ್​ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ಭರ್ಜರಿ 16 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ, ರೋಹಿತ್​ ಶರ್ಮಾ 2 ಸಿಕ್ಸರ್​ ಸಿಡಿಸಿದ ಹೊರತಾಗಿಯೂ ಮತ್ತೆ ಟೈನಲ್ಲಿ ಅಂತ್ಯವಾಯಿತು. ಹಾಗಾಗಿ ಫಲಿತಾಂಶ ನಿರ್ಧರಿಸಲು ಮತ್ತೊಂದು ಸೂಪರ್ ಓವರ್​ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 11 ರನ್ ಗಳಿಸಿತು. ಅಫ್ಘನ್ 1 ರನ್ ಗಳಿಸಿ 10 ರನ್​ಗಳಿಂದ ರೋಹಿತ್ ಪಡೆಗೆ ಶರಣಾಯಿತು.

    ವಿರಾಟ್ ಡ್ಯಾನ್ಸ್: ಪಂದ್ಯದ ನಂತರ ಮೊದಲ ಸೂಪರ್​ ಓವರ್​​ನಲ್ಲೂ ಫಲಿತಾಂಶ ಬಾರದ ಕಾರಣಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಜೆಯಲ್ಲಿ ವಿಶಿಷ್ಟವಾದ ‘ಮೋಯೆ ಮೋಯೆ’ ಹಾಡನ್ನು ಹಾಕಲಾಯಿತು. ಇದು ನಿರ್ದಿಷ್ಟ ವ್ಯಕ್ತಿ ಅಥವಾ ತಂಡಕ್ಕೆ ತಪ್ಪಾಗಿರುವ ಸನ್ನಿವೇಶವನ್ನು ಗೇಲಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಹಾಡನ್ನು ಬಳಸಲಾಗುತ್ತದೆ. ಈ ಹಾಡನ್ನು ಪ್ಲೇ ಮಾಡಿದ ನಂತರ ವಿರಾಟ್ ಕೊಹ್ಲಿ ಈ ಐಕಾನಿಕ್ ಮೀಮ್​​ಗೆ ಡ್ಯಾನ್ಸ್ ಮಾಡಿ ಇನ್ನಷ್ಟು ತಮಾಷೆ ಮಾಡಿದ್ದಾರೆ.

    ಅಭಿಮಾನಿಗಳೂ ಸ್ಟೆಪ್ಸ್​: ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಈ ಹಾಡಿಗೆ ಸ್ಟೆಪ್ಸ್ ಹಾಕಿದರು. ಮೊಯೆ ಮೊಯೆ ಎಂದು ಇಡೀ ಮೈದಾನವೇ ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದರು. ಸಹ ಆಟಗಾರರು ಈ ಡ್ಯಾನ್ಸ್​ನೋಡಿ ಬಿದ್ದು ಬಿದ್ದು ನಕ್ಕರು. ಇನ್ನು ವಿರಾಟ್ ಡ್ಯಾನ್ಸ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಭಿನ್ನ ಕಮೆಂಟ್​ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
    ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಒಂದು ಹಂತದಲ್ಲಿ 22 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ದಾಖಲೆ 190 ರನ್​ಗಳ ಜೊತೆಯಾಟವಾಡಿದರು. ಇದು ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟ. ಮತ್ತೊಂದೆಡೆ 5ನೇ ಟಿ20 ಶತಕ ಸಿಡಿಸಿದ ರೋಹಿತ್​, ನಾಯಕನಾಗಿ ಹಲವು ದಾಖಲೆ ಬರೆದಿದ್ದಾರೆ.

    ವಿಶ್ವ ಚಾಂಪಿಯನ್ ಡಿಂಗ್​ ಮಣಿಸಿ ನಂ.1 ಸ್ಥಾನಕ್ಕೇರಿದ ಪ್ರಜ್ಞಾನಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts