

ನವದೆಹಲಿ: ಫಾರ್ಮ್ಗೆ ಮರಳಲು 13 ವರ್ಷದ ಬಳಿಕ ರಣಜಿ ಟ್ರೋಫಿ ಆಡುತ್ತಿರುವ ವಿರಾಟ್ ಕೊಹ್ಲಿ (Virat Kohli) ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದ್ದಾರೆ. ದೆಹಲಿ ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ 6 ರನ್ಗಳಿಸಿ ಔಟಾಗಿದ್ದು, ದೇಶೀಯ ಟೂರ್ನಿಯಲ್ಲೂ ವಿರಾಟ್ ವೈಫಲ್ಯವನ್ನು ಅನುಭವಿಸಿದ್ದಾರೆ.
ದೆಹಲಿ ಪರ ಬ್ಯಾಟಿಂಗ್ ಮಾಡಲು ಬಂದ ವಿರಾಟ್ 13 ಎಸೆತಗಳಲ್ಲಿ 1 ಬೌಂಡರಿ ಸಹಿತ 6 ರನ್ಗಳಿಸಿದ್ದು, ಬೌಂಡರಿ ಸಿಡಿಸಿದ ಮರು ಎಸೆತದಲ್ಲೇ ವಿರಾಟ್ ಕೊಹ್ಲಿ (Virat Kohli) ವೇಗಿ ಹಿಮಾಂಶು ಸಂಗ್ವಾನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಮುಖ ಮಾಡಿದ್ದಾರೆ. ವಿರಾಟ್ ಕ್ಲೀನ್ ಬೌಲ್ಡ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
13 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾದ ವಿರಾಟ್ರನ್ನು (Virat Kohli) ನೋಡಲು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ವಿರಾಟ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಇಳಿಯುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಆದರೆ ಬೌಂಡರಿ ಸಿಡಿಸಿದ ಮರು ಎಸೆತದಲ್ಲೇ ಸ್ಟೈಟ್ ಡ್ರೈವ್ ಮಾಡಲು ಹೋಗಿ ಕ್ಲೀನ್ಬೌಲ್ಡ್ ಆಗಿದ್ದಾರೆ. ವಿರಾಟ್ ಔಟಾಗುತ್ತಿದ್ದಂತೆ ಅಭಿಮಾನಿಗಳು ಬೇಸರದಿಂದ ಮೈದಾನ ತೊರೆಯಲು ಶುರು ಮಾಡಿದರು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡ ಕೇವಲ 241 ರನ್ಗಳಿಗೆ ಆಲ್ಔಟ್ ಆಯಿತು. ಮೊದಲ ದಿನ ಕೊಹ್ಲಿ ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ, ಅಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಆಯಿತು. ಎರಡನೇ ದಿನ ಕೊಹ್ಲಿ ಅವರು ಡೆಲ್ಲಿ ಪರ ಬ್ಯಾಟ್ ಬೀಸಿದರು. ಆದರೆ, ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದರು.