ಪ್ರೇಮಾನಂದ ಮಹಾರಾಜ್‌ ಆಸ್ಥಾನದಲ್ಲಿ ‘ಸ್ಟಾರ್​’ ದಂಪತಿ; ಮಕ್ಕಳೊಂದಿಗೆ ವಿರಾಟ್​ & ಅನುಷ್ಕಾ ಹೋಗಿದ್ದೇಕೆ? | Virat Kohli & Anushka

Untitled design - 2025-01-10T140506.249
Published on

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ ಅಷ್ಟು ವಿಶೇಷವಾಗೇನೂ ಇಲ್ಲ. ಇದೇ ಸಮಯದಲ್ಲಿ ಕೊಹ್ಲಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಊಹಾಪೋಹಗಳ ನಡುವೆ ವಿರಾಟ್ ಕೊಹ್ಲಿ ಪ್ರೇಮಾನಂದ ಮಹಾರಾಜ್‌ ಅವರನ್ನು ಭೇಟಿ ಮಾಡಿದ್ದಾರೆ.(Virat Kohli & Anushka)

ವಿರಾಟ್​​ ಕೊಹ್ಲಿ ಜತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಮಿಕಾ-ಅಹಾನ್ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಸ್ಟಾರ್​ ದಂಪತಿ ಪ್ರೇಮಾನಂದ ಮಹಾರಾಜ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಇಬ್ಬರಿಗೂ ಪ್ರೇಮಾನಂದ ಮಹಾರಾಜ್​ ಅವರು ಸಲಹೆ ನೀಡುತ್ತಿರುವುದನ್ನು ಕಾಣಬಹುದು. ಕೊಹ್ಲಿಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೊಹ್ಲಿಯ ವೃತ್ತಿಜೀವನದ ದೃಷ್ಟಿಯಿಂದ ಚಾಂಪಿಯನ್ಸ್ ಟ್ರೋಫಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಫಾರ್ಮ್‌ಗೆ ಬರಲು ವಿರಾಟ್‌ಗೆ ಉತ್ತಮ ಅವಕಾಶ ಸಿಗಲಿದೆ. ವಾಸ್ತವವಾಗಿ 2023ರ ಆರಂಭದಲ್ಲಿ ವಿರಾಟ್ ಕೊಹ್ಲಿ ಇದೇ ರೀತಿಯಲ್ಲಿ ಪ್ರೇಮಾನಂದ ಮಹಾರಾಜ್ ಅವರ ಆಶ್ರಯವನ್ನು ತಲುಪಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ಆಡಿದ ಸರಣಿಯಲ್ಲಿ ಕಿಂಗ್ ಕೊಹ್ಲಿ ಸತತ ಎರಡು ಶತಕ ಸಿಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ಗೆ 2023 ವರ್ಷ ಅದ್ಭುತವಾಗಿತ್ತು. ಕೊಹ್ಲಿ 27 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 72.47 ಸರಾಸರಿಯಲ್ಲಿ 1377 ರನ್ ಗಳಿಸಿದ್ದರು. ವಿರಾಟ್ 6 ಶತಕ ಹಾಗೂ 8 ಅರ್ಧ ಶತಕ ಸಿಡಿಸಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net