ಕೊಲಂಬೊ: ಪ್ರಸ್ತುತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೈಗೊಂಡಿರುವ ಭಾರತ, ಇಂದು ಎರಡನೇ ಪಂದ್ಯದಲ್ಲಿ ಲಂಕಾ ಪಡೆಯನ್ನು ಮಣಿಸಲು ಭಾರೀ ಪೈಪೋಟಿಗೆ ಇಳಿದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಇದೀಗ ಈ ಗುರಿಯನ್ನು ಬೆನ್ನಟ್ಟಿರುವ ಟೀಮ್ ಇಂಡಿಯಾ ಪಂದ್ಯ ಗೆಲ್ಲಲಿದೆಯೇ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.
ಇದನ್ನೂ ಓದಿ: ರಾಯನಾಳ ರಸ್ತೆ ಅವಸ್ಥೆ
ಟೀಮ್ ಇಂಡಿಯಾ ಬೌಲರ್ಗಳನ್ನು ಎದುರಿಸಿದ ಶ್ರೀಲಂಕಾ ಬ್ಯಾಟರ್ಗಳು ಆರಂಭಿಕ ಹಂತದಿಂದಲೇ ಮಂದಗತಿಯಲ್ಲಿ ಸಾಗಿದ್ದು, ಒಬ್ಬರಂತೆ ಒಬ್ಬರು ಸ್ಟಾರ್ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು. ಈ ವೇಳೆ ಅಕ್ಸರ್ ಪಟೇಲ್ ಬೌಲಿಂಗ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸದೀರ ಸಮರವಿಕ್ರಮ, ಕಾದು ಆಡುವಲ್ಲಿ ವಿಫಲಗೊಂಡು ನೇರವಾಗಿ ಕೊಹ್ಲಿಗೆ ಕ್ಯಾಚ್ ನೀಡಿದರು. ಈ ಸಿಂಪಲ್ ಕ್ಯಾಚ್ ಹಿಡಿದ ವಿರಾಟ್, ಎಂದಿನಂತೆ ಮೈದಾನದಲ್ಲೇ ನಾಲ್ಕು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.
Can never get enough of Kohli’s celebrations 🕺
The Axar-Virat duo fetches India another wicket!
Watch #SLvIND 2nd ODI LIVE NOW on #SonyLIV 🍿 pic.twitter.com/YF6eW6E7Di
— Sony LIV (@SonyLIV) August 4, 2024
21 ಎಸೆತಗಳಲ್ಲಿ ಕೇವಲ 14 ರನ್ ಕಲೆಹಾಕಿದ ಸಮರವಿಕ್ರಮ, ಸಿಕ್ಸರ್ ಸಿಡಿಸಲು ಹೋಗಿ ಎಡವಿ ವಿರಾಟ್ಗೆ ಸಿಂಪಲ್ ಕ್ಯಾಚ್ ಕೊಟ್ಟರು. ಈ ಕ್ಯಾಚ್ ಹಿಡಿದು ಸಂಭ್ರಮಿಸಿದ ಕೊಹ್ಲಿ, ಸಖತ್ ಸ್ಟೆಪ್ ಹಾಕುವ ಮೂಲಕ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳನ್ನು ರಂಜಿಸಿದರು. ಸದ್ಯ ಕಿಂಗ್ ಕೊಹ್ಲಿಯ ಡ್ಯಾನ್ಸ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.