ತೆಲಂಗಾಣ: 11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟಿರುವ ಲಾವಣ್ಯ ಒಂದೆಡೆಯಾದರೆ, ಪೊಲೀಸರು ಕಳಿಸಿರುವ ವಿಚಾರಣಾ ನೋಟಿಸ್ಗೆ ಲಾಯರ್ ಮೂಲಕ ಪ್ರತಿಕ್ರಿಯಿಸಿರುವ ರಾಜ್ ತರುಣ್, ಮೊದಲ ವಿಚಾರಣೆಗೆ ಗೈರಾಗಿದ್ದರು. ಇವರಿಬ್ಬರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮತ್ತೊಂದು ಶಾಕಿಂಗ್ ವಿಚಾರ ಹೊರಬಿದ್ದಿದೆ. ಸಂದರ್ಶನಕ್ಕೆಂದು ಹೋದಾಗ ರಾಜ್ ಸ್ನೇಹಿತನಾದ ರೇಡಿಯೋ ಜಾಕಿ ಶೇಖರ್ ಭಾಷಾ, ತನ್ನ ಹೊಟ್ಟೆಗೆ ಹಾಗೂ ಖಾಸಗಿ ಅಂಗಗಳಿಗೆ ಥಳಿಸಿರುವುದಾಗಿ ನಟಿ ಲಾವಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಅನಾಥ ಮಹಿಳೆಯರು, ಮಕ್ಕಳಿಗೆ ಲಯನ್ಸ್ ಸಂಸ್ಥೆ ಸಹಾಯ
ರಾಜ್ ತರುಣ್ ಹಾಗೂ ಮಾಜಿ ಪ್ರಿಯತಮೆ ಲಾವಣ್ಯ ಮತ್ತು ನಟಿ ಮಾಳ್ವಿ ಮಲ್ಹೋತ್ರಾ ನಡುವಿನ ಲವ್ ಟ್ರೈಆ್ಯಂಗಲ್ ಸದ್ಯ ಟಾಲಿವುಡ್ ಅಂಗಳದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಈ ಮೂವರ ವಿವಾದ ಇದೀಗ ತೆಲುಗು ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ತಮ್ಮಿಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಯೂಟ್ಯೂಬ್ ಸಂದರ್ಶನದ ವೇಳೆ ಆರ್ಜೆ ಹಾಗೂ ಆರೋಪಿ ರಾಜ್ ಸ್ನೇಹಿತನಾಗಿರುವ ಶೇಖರ್, ಲಾವಣ್ಯ ಹೊಟ್ಟೆಗೆ ಮತ್ತು ಖಾಸಗಿ ಅಂಗಗಳಿಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾವಣ್ಯ, ತನ್ನ ಪ್ರಿಯಕರ ರಾಜ್ ತರುಣ್ ಸ್ನೇಹಿತನಾದ ಶೇಖರ್ ಬಾಷಾ ಬೆನ್ನು, ಹೊಟ್ಟೆ ಮತ್ತು ಖಾಸಗಿ ಅಂಗಗಳಿಗೆ ಥಳಿಸಿದ್ದಾನೆ. ಈ ಹಿಂದೆಯೂ ಹಲುವು ಬಾರಿ ಜೀವ ಬೆದರಿಕೆ ಹಾಕಿದ್ದ. ಮನೆಯ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,(ಏಜೆನ್ಸೀಸ್).
ಅವರಂತೆ ಬ್ಯಾಟ್ ಮಾಡಲು ನನ್ನಿಂದ ಸಾಧ್ಯವಿಲ್ಲ: ಚೇತೇಶ್ವರ್ ಪೂಜಾರ ಹೊಗಳಿದ ವಿದೇಶಿ ಸ್ಟಾರ್ ಬ್ಯಾಟರ್