ಟೋಲ್ ಪ್ಲಾಜಾಗಳು ಒಂದು ಕಾಲದಲ್ಲಿ ತೊಂದರೆ ಕೊಡುವವರಿಗೆ ನೆಚ್ಚಿನ ಸ್ಥಳವಾಗಿದ್ದವು. ಟೋಲ್ ತೆರಿಗೆಗೆ ಸಂಬಂಧಿಸಿದ ಘರ್ಷಣೆಗಳ ಮೊದಲು ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದ್ದವು. ಆದರೆ ಈ ಬಾರಿ ಒಬ್ಬ ಮಹಿಳೆ ಟೋಲ್ ಪ್ಲಾಜಾದಲ್ಲಿ ಮಾಡಿರುವ ಕೆಲಸದ ವಿಡಿಯೋ ಹರಿದಾಡುತ್ತಿದ್ದು, ನೋಡುಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನು ಓದಿ: ಮದುವೆಯ ಫೋಟೋಶೂಟ್ ವೇಳೆ ನಡೆದಿದ್ದು ಮಾತ್ರ ಧಾರುಣ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..
ವೈರಲ್ ವಿಡಿಯೋದಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಾ ಮಹಿಳೆಯೊಬ್ಬರು ಬರುವುದನ್ನು ನೋಡಬಹುದು. ಅವರ ಹಿಂದೆ ಹುಡುಗನೊಬ್ಬ ಕುಳಿತ್ತಿದ್ದಾನೆ. ಟೋಲ್ ಪ್ಲಾಜಾ ಸನಿಹ ಬರುತ್ತಿದ್ದಂತೆ ದ್ವಿಚಕ್ರ ವಾಹನವನ್ನು ನಿಲ್ಲಿಸುತ್ತಾಳೆ. ಬಳಿಕ ಹಿಂದೆ ಕುಳಿತಿದ್ದ ವ್ಯಕ್ತಿ ಇಳಿದು ತನ್ನ ಕೈಗಳಿಂದ ಟೋಲ್ ಗೇಟ್ ಎತ್ತಿದ ತಕ್ಷಣ, ಆಕೆ ಸ್ಕೂಟರ್ ಅನ್ನು ವೇಗವಾಗಿ ಓಡಿಸಿ ಮುಂದೆ ಬಂದು ಆ ವ್ಯಕ್ತಿಯನ್ನು ತನ್ನ ಹಿಂದೆ ಕೂರಿಸಿಕೊಂಡು ಅಲ್ಲಿಂದ ಹೋಗುವುದನ್ನು ಕಾಣಬಹುದು. ಅಸಲಿಗೆ ಮಹಿಳೆ ಹೀಗೆ ಮಾಡಿದ್ದೇಕೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಏಕೆಂದರೆ ಟೋಲ್ ಪ್ಲಾಜಾಗಳಲ್ಲಿ ಬೈಕ್ಗಳಿಗೆ ಯಾವುದೇ ಟೋಲ್ ವಿಧಿಸುವುದಿಲ್ಲ.
ಈ 13 ಸೆಕೆಂಡುಗಳ ವಿಡಿಯೋವನ್ನು ಇದುವರೆಗೂ 6 ಮಿಲಿಯನ್ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ದ್ವಿಚಕ್ರ ವಾಹನಗಳಿಗೆ ಟೋಲ್ ಎಲ್ಲಿ ವಿಧಿಸಲಾಗುತ್ತದೆ?, ಇದು ಅವರಿಗೆ ಟೋಲ್ ಗೇಟ್ ಅಲ್ಲ ಬದಲಾಗಿ ಅವರ ಮನೆಯ ಗೇಟ್, ಈ ಘಟನೆಯು ಇಡೀ ಟೋಲ್ ಗೇಟ್ ಸಮುದಾಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ, ನೀವು ಪಕ್ಕದಿಂದ ಮಾತ್ರ ಹೋಗಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಕೇರಳದ ‘ವಾಟರ್ ಮೆಟ್ರೋ’ ಪರಿಚಯಿಸಿದ ವಿದೇಶಿಗ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ.. | Water Metro