ಮದುವೆಯ ಫೋಟೋಶೂಟ್ ವೇಳೆ ನಡೆದಿದ್ದು ಮಾತ್ರ ಧಾರುಣ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

blank

ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್​​ ಮಾಡಿಸುವುದು ಸಾಮಾನ್ಯವಾಗಿದೆ. ಮದುವೆಗೂ ಮುನ್ನ ಪ್ರೀವೆಡ್ಡಿಂಗ್​, ಗರ್ಭಧಾರಣೆಯಾದಾಗ, ಹೀಗೆ ಯಾವುದೇ ಒಂದು ಖುಷಿಯ ವಿಚಾರವನ್ನು ಸೆರೆಹಿಡಿದು ಮೆಮೋರಿಯಾಗಿ ಸಂಗ್ರಹಿಸುವುದು ಅಭ್ಯಾಸವಾಗಿದೆ. ಅದರಲ್ಲೂ ಪ್ರತಿ ಹುಡುಗಿಗೂ ಮದುವೆಯ ದಿನ ತುಂಬಾ ವಿಶೇಷವಾಗಿರುತ್ತದೆ. ಈ ದಿನವನ್ನು ಸ್ಮರಣೀಯವಾಗಿಸಲು ಪ್ರತಿಯೊಬ್ಬ ವಧುವೂ ಮದುವೆಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಈ ಸಂತೋಷದ ಕ್ಷಣವು ತುಂಬಾ ಭಯಾನಕ ಅಪಘಾತವಾಗಿ ಬದಲಾದರೆ.. ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ.

ಇದನ್ನು ಓದಿ: ಕೇರಳದ ‘ವಾಟರ್ ಮೆಟ್ರೋ’ ಪರಿಚಯಿಸಿದ ವಿದೇಶಿಗ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ.. | Water Metro

ಮದುವೆಯ ದಿನದಂದು ಅಪಘಾತವಾಗುವುದರ ಬಗ್ಗೆ ಯೋಚನೆ ಬಂದರೂ ಭಯವಾಗುತ್ತದೆ. ಆದರೆ ಮದುವೆಯ ದಿನದಂದೆ ದಂಪತಿಗೆ ಕಹಿ ಘಟನೆಯೊಂದು ಎದುರಾಗಿದೆ. ಇದರಿಂದಾಗಿ ಆ ಸಂತೋಷದ ದಿನವು ದುರಂತವಾಗಿ ಮಾರ್ಪಟ್ಟಿತು. ವಾಸ್ತವವಾಗಿ ಈ ಜೋಡಿ ಕೆನಡಾದಿಂದ ಬೆಂಗಳೂರಿಗೆ ಮದುವೆಯಾಗಲು ಬಂದಿದ್ದರು. ಆದರೆ ಮದುವೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವಾಗ ಅವರಿಗೆ ನೋವಿನ ಆಘಾತ ಸಂಭವಿಸಿದೆ.

ವೈರಲ್​ ವಿಡಿಯೋದಲ್ಲಿ ಮದುವೆಯ ದಿನದಂದು ದಂಪತಿ ಫೋಟೋಶೂಟ್ ಮಾಡಿಸಲು ನಿಂತಿರುವುದನ್ನು ನೋಡಬಹುದು. ಫೋಟೋ ಕ್ಲಿಕ್ಕಿಸುತ್ತಿರುವಾಗ ವಧುವನ್ನು ವರ ತನ್ನ ತೋಳುಗಳಲ್ಲಿ ಎತ್ತಿಕೊಂಡಿದ್ದಾಮೆ, ಅವರ ಹಿಂದೆ ಹಲವಾರು ಬಣ್ಣದ ಪಟಾಕಿ ಏಕಕಾಲದಲ್ಲಿ ಸ್ಫೋಟಗೊಳ್ಳಲು ಪ್ರಾರಂಭಿಸಿದವು. ವರ್ಣರಂಜಿತ ಹೊಗೆ ಬಾಂಬ್‌ಗಳು ಬಣ್ಣದ ಪುಡಿ ಮತ್ತು ಹೊಗೆಯನ್ನು ಬಿಡುಗಡೆ ಮಾಡುತ್ತವೆ. ಆದರೆ ಪಟಾಕಿಯ ಕಿಡಿ ವಧುವಿನ ಕೂದಲಿಗೆ ತಾಗುತ್ತದೆ. ಇದರಿಂದ ವಧು ತೀವ್ರವಾಗಿ ಗಾಯಗೊಳ್ಳುತ್ತಾರೆ. ವಿಡಿಯೋದಲ್ಲಿ ಅಪಘಾತದ ನಂತರ ವಧು ಆಸ್ಪತ್ರೆಯ ಹಾಸಿಗೆಯ ಮೇಲೆ ಗಾಯಗೊಂಡು ಮಲಗಿರುವುದು ಮತ್ತು ಆಕೆಯ ದೇಹದ ಮೇಲೆ ಗಂಭೀರವಾದ ಗಾಯಗಳಾಗಿರುವುದನ್ನು ಕಾಣಬಹುದು.

ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಸಲಹೆ ನೀಡುತ್ತಿದ್ದರೆ, ಮತ್ತೆ ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ದೃಷ್ಟಿಯಿಂದ ಈ ಅಪಘಾತ ಸಂಭವಿಸಿಲ್ಲ, ಈ ಘಟನೆಗೆ ಕೆಟ್ಟ ಕಣ್ಣು ಕಾರಣ ಎಂದು ದೂಷಿಸಬೇಡಿ, ಸುರಕ್ಷತೆ ಬಗ್ಗೆ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ, ಪಟಾಕಿ ಪಕ್ಕದಲ್ಲಿ ಏಕೆ ನಿಲ್ಲಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ರೈಲಿನ ಬೋಗಿ ಮೇಲೆ ಕುಳಿತು ಸುಮಾರು 200 ಕಿ.ಮೀ. ಪ್ರಯಾಣಿಸಿದ ಕೋತಿ; ಕೆಳಗಿಳಿಸಲು ಮಾಡಿದ ಪ್ರಯತ್ನ ವಿಫಲ..ಮುಂದೇನಾಯ್ತು ನೀವೇ ನೋಡಿ | Monkey Rescued

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…