ಚಹಾಪ್ರಿಯರು ಸಾಮಾನ್ಯವಾಗಿ ಚಹಾವನ್ನು ಚೆನ್ನಾಗಿ ಬೇಯಿಸಿ, ಕುದಿಸಿ ಕುಡಿಯಲು ಇಷ್ಟ ಪಡುತ್ತಾರೆ. ಟೀ ಬ್ಯಾಗ್‌ಗಳೊಂದಿಗೆ ಚಹಾವನ್ನು ಕುಡಿಯಲು ಇಷ್ಟಪಡುವ ಚಹಾ ಪ್ರೇಮಿಗಳು ಬಹಳ ಕಡಿಮೆ. ರುಚಿಗೆ ತಕ್ಕಂತೆ ಆದ್ಯತೆ ಕೊಡುವವರೇ ಹೆಚ್ಚು. ಮಹಿಳೆಯೊಬ್ಬರು ವಿಶೇಷ ವಿಧಾನದಲ್ಲಿ ಚಹಾ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗ್ಯಾಸ್ನಿಂದಲ್ಲಾ ಆಕೆ ಏರ್ ಫ್ರೈಯರ್ನಿಂದ ಚಹಾ ತಯಾರಿಸಿದ್ದಾರೆ.
ಇದನ್ನು ಓದಿ: ಜಡೆ ಜಗಳದ ನಡುವೆ ಹುಡುಗ ವೈಲೆಂಟ್; ಆತನ ವರ್ತನೆಗೆ ನೆಟ್ಟಿಗರು ಹೇಳಿದ್ದು ಹೀಗೆ | Viral Video
ವೈರಲ್ ವಿಡಿಯೋದಲ್ಲಿ ಮಹಿಳೆ ಏರ್ ಫ್ರೈಯರ್‌ನಲ್ಲಿ ಕಪ್ ಇಡುತ್ತಿರುವುದನ್ನು ಕಾಣಬಹುದು. ಅದರ ನಂತರ ಆಕೆ ಚಹಾದ ಬ್ಯಾಗ್ವೊಂದನ್ನು ಅದರಲ್ಲಿ ಹಾಕುತ್ತಾರೆ. ನಂತರ ಒಂದು ಲೋಟದಲ್ಲಿ ನೀರನ್ನು ಹಿಡಿದು ಕಪ್ಗೆ ಹಾಕುತ್ತಾರೆ. ರುಚಿಗೆ ತಕ್ಕಂತೆ 1 ಚಮಚ ಸಕ್ಕರೆಯನ್ನು ಸೇರಿಸುತ್ತಾರೆ. ನಂತರ ಏರ್ ಫ್ರೈಯರ್‌ನಲ್ಲಿ ಸಮಯವನ್ನು ಸೆಟ್ ಮಾಡುತ್ತಾರೆ. ನಿಗದಿ ಪಡಿಸಿದ ಸಮಯ ಪೂರ್ಣಗೊಂಡ ಬಳಿಕ ತೆಗೆದು ಕಪ್ಗೆ ಹಾಲನ್ನು ಸೇರಿಸುತ್ತಾರೆ. ಸ್ವಲ್ಪ ಸಮಯದ ನಂತರ ಆಕೆ ಮತ್ತೆ ಕಪ್ ತೆಗೆದಾಗ ಚಹಾ ಸಿದ್ಧವಾಗಿದೆ ಎಂದು ತೋರಿಸುವುದನ್ನು ನೋಡಬಹುದಾಗಿದೆ.
ಗ್ಯಾಸ್ ಮತ್ತು ಸ್ಟೌವ್ ಇಲ್ಲದೆ ಚಹಾ ಮಾಡಲು ಜನರಿಗೆ ಹೇಳಿಕೊಟ್ಟಿರುವ ಸುಮಾರು 48 ಸೆಕೆಂಡುಗಳ ಈ ವಿಡಿಯೋವನ್ನು ನೋಡಿದ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆ ಈ ಚಹಾವನ್ನು ಸಹ ಕುಡಿದಿಲ್ಲ ಎಂದು ನಾನು ಬಾಜಿ ಕಟ್ಟುತ್ತೇನೆ, ಕೊಳಕು ಬಾಣಲೆಯಲ್ಲಿ ಚಹಾ ಮಾಡುವುದು ಹೇಗೆ, ಅದರಲ್ಲಿ ಮಾಡಿದ ಚಹಾವನ್ನು ನಾನು ಎಂದಿಗೂ ಕುಡಿಯಲು ಸಾಧ್ಯವಿಲ್ಲ, ಬ್ಯಾಗ್ ಕಪ್‌ನಲ್ಲಿದ್ದಾಗ ನೀವು ಹಾಲು ಸುರಿದಿದ್ದೀರಿ ಎಂದು ನನಗೆ ನಂಬಲಾಗುತ್ತಿಲ್ಲ, ಈ ಮಹಿಳೆಯ ಹೊಸ ಚಹಾ ಮಾಡುವ ವಿಧಾನವನ್ನು ಹೆಚ್ಚಿನ ಜನರು ಇಷ್ಟಪಡುತ್ತಿಲ್ಲ, ಶಾರ್ಟ್‌ಕಟ್ ಉತ್ತಮವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಪಂಚದ ಅದ್ಭುತಗಳಲ್ಲಿ ಒಂದಾದ ಗಿಜಾದ ಪಿರಮಿಡ್ ಏರಿದ ಶ್ವಾನ; ಮುಂದೇನಾಯ್ತು ನೀವೇ ನೋಡಿ | VIral Video