ಮೊಬೈಲ್​​ ಬಳಸುತ್ತಾ ರಸ್ತೆ ದಾಟುತ್ತಿದ್ದ ಹುಡುಗಿಗೆ ಕಾರು ಡಿಕ್ಕಿ; ಮುಂದಾಗಿದ್ದು ನೋಡಿದ್ರೆ ಶಾಕ್​ ಆಗೋದು ಪಕ್ಕಾ | Viral Video

Untitled design - 2024-11-17T192732.478
Published on

ಸಿಂಗಾಪುರ: ಇತ್ತೀಚಿನ ದಿನಗಳಲ್ಲಿ ಫೋನಿನ ಚಟ ಎಷ್ಟಿದೆ ಎಂದರೆ ಈ ವಿಷಯದಲ್ಲಿ ತಾವು ಎಷ್ಟು ಅಸಡ್ಡೆಯಿಂದ ಇರುತ್ತೇವೆಂಬುದನ್ನು ಅನೇಕ ಬಾರಿ ಜನರು ಮರೆತುಬಿಡುತ್ತಾರೆ. ಡ್ರೈವಿಂಗ್ ಮಾಡುವಾಗ ಫೋನ್ ಬಳಸುವುದು ಹೇಗೆ ಅಪಘಾತಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಲವಾರು ಬಾರಿ ನೋಡಿರುತ್ತೇವೆ. ಸದ್ಯ ಸಾಮಾಜಿಕ ಜಾಲತಾಣಲದಲಿ ವಿಡಿಯೋವೊಂದು ವೈರಲ್​(Viral Video) ಆಗುತ್ತಿದೆ. ಅದರಲ್ಲಿ ಮಹಿಳೆಯೊಬ್ಬರು ಮೊಬೈಲ್​ ಬಳಸುತ್ತಾ ಎಂಥಾ ದೊಡ್ಡ ತಪ್ಪು ಮಾಡಿದ್ದಾರೆ ಎಂದು ನೀವು ನೋಡಿ. ಈ ವಿಡಿಯೋ ಸಿಂಗಾಪುರದ್ದು ಎನ್ನಲಾಗಿದೆ.

ವೈರಲ್​​ ವಿಡಿಯೋದಲ್ಲಿ ಒಬ್ಬ ಮಹಿಳೆ ತನ್ನ ಮೊಬೈಲ್​​ ಬಳಸುತ್ತಾ ರಸ್ತೆಯನ್ನು ದಾಟುತ್ತಿರುವುದನ್ನು ಕಾಣಬಹುದು. ಆಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಆ ಹುಡುಗಿ ರಸ್ತೆ ಮೇಲೆ ಬೀಳುತ್ತಾಳೆ. ಇಡೀ ಘಟನೆ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್​​ ಆಗಿದೆ. ಅಪಘಾತದ ನಂತರ ಕಾರಿನಲ್ಲಿದ್ದವರು ತಕ್ಷಣವೇ ಕಾರಿನಿಂದ ಇಳಿದು ಮಹಿಳೆಯ ಸ್ಥಿತಿಯನ್ನು ನೋಡಲು ಹೋಗುವುದುನ್ನು ನೋಡಬಹುದು. ಆದರೆ ಅಷ್ಟರಲ್ಲಾಗಲೆ ಆ ಹುಡುಗಿ ಎದ್ದು ಕುಳಿತುಕೊಳ್ಳುತ್ತಾಳೆ.

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ ಆ ಹುಡುಗಿ ಕುಳಿತು ತನಗೆನಾದರೂ ಆಗಿದೆಯೇ ಎಂಬುದನ್ನು ನೋಡದೆ ತನ್ನ ಫೋನ್​​ ಅನ್ನು ನೋಡುತ್ತಾಳೆ. ಅದು ಮುರಿದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಇದುವರೆಗೂ 50 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ನೆಟ್ಟಿಗರ ಪ್ರತಿಕ್ರಿಯೆಯ ಮಹಾಪೂರವೇ ಹರಿದುಬಂದಿದೆ. ಗಂಭೀರವಾದ ಗಾಯದ ನಂತರವೂ ಮಹಿಳೆ ತನ್ನ ಫೋನ್‌ ನೋಡುವುದರಲ್ಲಿ ಮಗ್ನಳಾಗಿದ್ದಾಳೆ, ಆಕೆ ತನ್ನ ಗಾಯಕ್ಕಿಂತ ಫೋನ್ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿದ್ದಾಳೆ ಎಂಬುದು ಹುಚ್ಚುತನವಾಗಿದೆ, ಇತ್ತೀಚಿನ ದಿನಗಳಲ್ಲಿ ಇಡೀ ಪೀಳಿಗೆಯು ಫೋನ್‌ ಗೀಳನ್ನು ಹೊಂದಿದೆ ಅವರಿಗೆ ಏನೂ ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net