ಕುಸ್ತಿ ಪಟುಗಳಂತೆ ಹುಲಿಗಳ ಕಾದಾಟ | Viral Video ನೋಡಿ ನೆಟ್ಟಿಗರು ಫಿದಾ

Untitled design - 2024-11-17T191044.637
Published on

ಮುಂಬೈ: ಹುಲಿ, ಸಿಂಹ, ಚಿರತೆಯಂತಹ ಅಪಾಯಕಾರಿ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋವನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಅತ್ಯಂತ ಶಕ್ತಿಶಾಲಿ ಹುಲಿಗಳನ್ನು ಮುಂಭಾಗದಿಂದ ನೋಡುವುದು ಆಸಕ್ತಿದಾಯಕವಾಗಿರುತ್ತದೆ. ಮಹಾರಾಷ್ಟ್ರದ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ ಹಳೆಯ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ.

ವೈರಲ್​​ ವಿಡಿಯೋದಲ್ಲಿ ಎರಡು ಹುಲಿಗಳು ಪರಸ್ಪರ ಕಾದಾಡುತ್ತಿರುವುದನ್ನು ಕಾಣಬಹುದು. ಎರಡು ಹುಲಿಗಳು ಉಗುರುಗಳು, ಪಾದಗಳು ಅಥವಾ ಬಾಯಿಯಿಂದ ಪರಸ್ಪರ ಗಾಯಗೊಳ್ಳಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಸಾಕಷ್ಟು ಕಾದಾಟದ ನಂತರ ಒಂದು ಹುಲಿ ಅಂತಿಮವಾಗಿ ಇನ್ನೊಂದು ಹುಲಿಯಿಂದ ತನ್ನನ್ನು ಬಿಡಿಸಿಕೊಂಡು ದೂರದಲ್ಲಿ ನಿಲ್ಲುವುದನ್ನು ನೋಡಬಹುದು. ಇದರರ್ಥ ಈಗಾಗಲೇ ಹೋರಾಟದಲ್ಲಿ ಸೋಲನ್ನು ಒಪ್ಪಿಕೊಂಡಂತೆ.

ಸಾಮಾಜಿಕ ಜಾಲತಾಣದಲ್ಲಿ ಈ ಹಳೆಯ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಅದನ್ನು ನೋಡಿ ಇಷ್ಟಪಡುತ್ತಿದ್ದಾರೆ. ಮತ್ತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಯಕ ಮತ್ತು ಖಳನಾಯಕರ ಪರಸ್ಪರ ಹೊಡೆದಾದ, ಪ್ರಾಣಿ ಪ್ರಿಯರು ಇಷ್ಟಪಡುವ ಅಪರೂಪದ ದೃಶ್ಯ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net