ರಾತ್ರಿಯ ಕತ್ತಲೆಯಲ್ಲಿ ಕಳ್ಳರು ಎಷ್ಟು ನಿರ್ಭೀತರಾಗುತ್ತಾರೆಂದರೆ ಅವರು ಸಿಸಿಟಿವಿ ಕ್ಯಾಮೆರಾಗಳಿಗೂ ಹೆದರುವುದಿಲ್ಲ. ಲಖನೌದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ. ಅದರಲ್ಲಿ ಯುವಕನೊಬ್ಬ ಸ್ಕೂಟರ್‌ನ ಬೀಗವನ್ನು ಮುರಿದು ಪರಾರಿಯಾಗುತ್ತಿರುವುದನ್ನು ಕಾಣಬಹುದು.

ಇದನ್ನು ಓದಿ: ಬ್ಯಾಗ್ ಕದಿಯಲು ಬಂದಿದ್ದ ಬೈಕ್ ಸವಾರರಿಗೆ ಪಾಠ ಕಲಿಸಿದ ಧೈರ್ಯಶಾಲಿ ಹುಡುಗಿ; Viral Video ನೋಡಿ ಶಹಬ್ಬಾಸ್ ಎಂದ ನೆಟ್ಟಿಗರು
ವರದಿಗಳ ಪ್ರಕಾರ, ಈ ಘಟನೆ ಲಖನೌದ ಥಾನಾ ಘಾಜಿಪುರದ ಡಿ ಬ್ಲಾಕ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳ್ಳನ ಸಂಪೂರ್ಣ ಕೃತ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳತನ ಮಾಡುವಾಗ ಅವನು ತನ್ನ ಗುರುತನ್ನು ಮರೆಮಾಚಲು ತನ್ನ ಶರ್ಟ್‌ನ ಕಾಲರ್‌ನಿಂದ ಮುಖವನ್ನು ಮುಚ್ಚಿಕೊಳ್ಳುವುದನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ರಾತ್ರಿಯ ನಿರ್ಜನ ವಾತಾವರಣವು ಕಂಡುಬರುತ್ತದೆ. ರಸ್ತೆಯ ಬದಿಯಲ್ಲಿ ದ್ವಿಚಕ್ರ ವಾಹನಗಳು ನಿಂತಿರುತ್ತವೆ. ಆಗ ಒಬ್ಬ ವ್ಯಕ್ತಿ ಬಾಯಲ್ಲಿ ಉರಿಯುತ್ತಿರುವ ಸಿಗರೇಟನ್ನು ಹಿಡಿದುಕೊಂಡು ಸ್ಕೂಟರ್ ಬಳಿ ಬರುತ್ತಾನೆ. ಅವನು ಸ್ಕೂಟರ್ ಅನ್ನು ಒದ್ದು ಅದರ ಬೀಗವನ್ನು ಮುರಿಯಲು ಪ್ರಯತ್ನಿಸುತ್ತಾನೆ. ನಂತರ ಇದ್ದಕ್ಕಿದ್ದಂತೆ ಒಂದು ವಾಹನ ಬರುವುದನ್ನು ನೋಡಿ ಸ್ಕೂಟರ್ ಅಲುಗಾಡಿಸುವಂತೆ ನಟಿಸಿ ಸ್ವಲ್ಪ ಸಮಯದವರೆಗೆ ಅದರಿಂದ ದೂರ ಸರಿಯುತ್ತಾನೆ. ಬಳಿಕ ಹ್ಯಾಂಡಲ್ ಲಾಕ್ ಆಗಿರುವ ಸ್ಕೂಟರ್ ಅನ್ನು ಕಾಲಿನಿಂದ ಒದ್ದು ಲಾಕ್ ಓಪನ್ ಮಾಡಿ ಸ್ಕೂಟರ್ ಜತೆ ಮಂಗಮಾಯವಾಗುವುದನ್ನು ನೋಡಬಹುದು.
The thief broke the lock of the scooty in Lucknow and escaped with the scooty
pic.twitter.com/obqKEOhCI8— Ghar Ke Kalesh (@gharkekalesh) April 6, 2025
ಇದುವರೆಗೂ ಈ ವಿಡಿಯೋವನ್ನು 98 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಬೀಗ ಎಷ್ಟು ಸುಲಭವಾಗಿ ಮುರಿಯುತ್ತದೆ ಅವು ತುಂಬಾ ಹಗುರವಾಗಿವೆಯೇ?, ನಿರುದ್ಯೋಗ ಪರಿಸ್ಥಿತಿಯನ್ನು ನೋಡಿ ಕಳ್ಳರು ಸಹ ಈಗ ವೃತ್ತಿಪರರಾಗಿದ್ದಾರೆ, ಈಗ ನಾನು ನನ್ನ ಸ್ಕೂಟರ್ ಅನ್ನು ಮನೆಯೊಳಗೆ ನಿಲ್ಲಿಸಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಚಿರತೆ & ಅದರ ಮರಿಗಳಿಗೆ ನೀರು ಕೊಟ್ಟ ವ್ಯಕ್ತಿ; Viral Video ನೋಡಿ ಮಾನವೀಯತೆಯ ನೋಟ ಎಂದ ನೆಟ್ಟಿಗರು