

ಶಮ್ಮಿ ಕಪೂರ್ ಅವರನ್ನು ಬಾಲಿವುಡ್‌ನ ನಿಜವಾದ ರಾಕ್‌ಸ್ಟಾರ್ ಎಂದು ಕರೆಯಲಾಗುತ್ತದೆ. ಅವರ ಸೂಪರ್‌ಹಿಟ್ ಹಾಡುಗಳನ್ನು ಇಂದಿಗೂ ಪಾರ್ಟಿಗಳಲ್ಲಿ ಪ್ಲೇ ಮಾಡಲಾಗುತ್ತದೆ. ಉತ್ತಮ ನೃತ್ಯಗಾರರಿಗೂ ಶಮ್ಮಿ ಕಪೂರ್ ಅವರ ವಿಶಿಷ್ಟ ನೃತ್ಯ ಶೈಲಿಯನ್ನು ಕಾಪಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ರಷ್ಯಾದ ಕೆಲವು ಮಕ್ಕಳು ಶಮ್ಮಿ ಕಪೂರ್ ಮತ್ತು ಮುಮ್ತಾಜ್ ಅವರ 'ಆಜ್ಕಲ್ ತೇರೆ ಮೇರೆ ಪ್ಯಾರ್ ಕೆ ಚರ್ಚೆ' ಹಾಡಿಗೆ ನೃತ್ಯ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಮಕ್ಕಳು ಶಮ್ಮಿ ಕಪೂರ್ ಮತ್ತು ಮುಮ್ತಾಜ್ ಅವರಂತೆಯೇ ಒಂದೇ ರೀತಿಯ ಬಟ್ಟೆಗಳನ್ನು ಧರಿಸಿರುವುದನ್ನು ನೋಡಬಹುದು. ಅವರ ಅಭಿವ್ಯಕ್ತಿಗಳು ಮತ್ತು ನೃತ್ಯದ ಶೈಲಿಯು ಶಮ್ಮಿ ಕಪೂರ್ ಮತ್ತು ಮುಮ್ತಾಜ್ ಅವರಂತೆಯೇ ಇದೆ. ಈ ಹಾಡಿನಂತೆಯೇ ವೇದಿಕೆಯ ಸಂಪೂರ್ಣ ಸೆಟಪ್ ಕೂಡ ಮಾಡಲಾಗಿದೆ. ಹಿನ್ನೆಲೆ ಡ್ಯಾನ್ಸರ್‌ಗಳ ಬಟ್ಟೆ ಕೂಡ ಮ್ಯಾಚ್ ಮಾಡಿರುವುದನ್ನು ಕಾಣಬಹುದು.
ವಿಡಿಯೋದಲ್ಲಿ ಮಕ್ಕಳು ನೃತ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಲವರು ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ಇದು ಮುಮ್ತಾಜ್‌ನ ಮ್ಯಾಜಿಕ್, ಶಮ್ಮಿ ಕಪೂರ್ ಅವರನ್ನು ನೋಡಿದಂತೆಯೇ ಆಗುತ್ತಿದೆ, ಶಮ್ಮಿ ಕಪೂರ್ ಕೂಡ ಈ ಮಗುವನ್ನು ನೋಡಿ ಸಂತೋಷಪಡುತ್ತಾರೆ, ಶಮ್ಮಿ ಕಪೂರ್ ಮತ್ತು ಮುಮ್ತಾಜ್ ಅವರ ಹಾಡನ್ನು ಇದಕ್ಕಿಂತ ಉತ್ತಮವಾಗಿ ಮರುಸೃಷ್ಟಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.