ರೈಲ್ವೇ ಹಳಿ ಮೇಲೆ ಕೂತು ಹುಡುಗ ಫೋನಿನಲ್ಲಿ ಬ್ಯುಸಿ; ಲೋಕೋ ಪೈಲಟ್ ಮಾಡಿದ್ದೇನು ಗೊತ್ತಾ? | Viral Video

Untitled design (67)
Published on

ಲಖನೌ: ಪ್ರೀತಿಯಲ್ಲಿ ಮನುಷ್ಯ ಕುರುಡನಾಗುತ್ತಾನೆ ಎಂದು ಹೇಳುತ್ತಿದ್ದರು. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ(Viral Video) ನೋಡಿದ್ರೆ ಪ್ರೀತಿಯಲ್ಲಿ ಕುರುಡನಾಗುವುದು ಮಾತ್ರವಲ್ಲ ಮನುಷ್ಯ ಕಿವುಡನು ಆಗುತ್ತಾನೆ ಎಂಬುದನ್ನು ತೋರಿಸಿದಂತಿದೆ.

ವಾಸ್ತವವಾಗಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪ್ರೇಮಿಯೊಬ್ಬರು ರೈಲ್ವೆ ಹಳಿಯ ಮೇಲೆ ಕುಳಿತು ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿದ್ದರು. ಅವರಿಗೆ ಹಿಂದಿನಿಂದ ಬರುವ ರೈಲಿನ ಹಾರ್ನ್ ಸಹ ಕೇಳಲಿಲ್ಲ. ಆದ್ರೆ, ಲೋಕೋ ಪೈಲಟ್ ಮುಂದೆ ಏನು ಮಾಡಿದ್ರು ಅನ್ನೋದನ್ನ ನೋಡಬೇಕು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ವಿಡಿಯೋದಲ್ಲಿ ಹುಡುಗ ರೈಲ್ವೇ ಹಳಿಯ ಮೇಲೆ ಕುಳಿತು ಫೋನ್‌ನಲ್ಲಿ ಆಳವಾದ ಸಂಭಾಷಣೆಯಲ್ಲಿ ನಿರತನಾಗಿರುವುದನ್ನು ಕಾಣಬಹುದು. ಅವನ ಹಿಂಭಾಗದಲ್ಲಿ ರೈಲು ಬರುತ್ತಿದೆ. ಲೋಕೋ ಪೈಲೆಟ್​​​​ ಹಲವಾರು ಬಾರಿ ಹಾರ್ನ್ ಮಾಡುತ್ತಾರೆ. ಆದರೂ ವ್ಯಕ್ತಿಯು ಜಾಗರೂಕನಾಗದೆ ಹಳಿಗಳಿಂದ ದೂರ ಹೋಗುವುದಿಲ್ಲ. ಕದಲದೆ ಕುಳಿತಿರುವ ಹುಡುಗನನ್ನು ನೋಡಿ ರೈಲನ್ನು ನಿಲ್ಲಿಸಲಾಗುತ್ತದೆ. ಬಳಿಕ ರೈಲಿನಿಂದಕ ಲೋಕೋ ಪೈಲೆಟ್​​​ ಕೆಳಗಿಳಿಯುತ್ತಾರೆ. ಬಳಿಕ ಯುವಕ ಗಾಬರಿಗೊಂಡು ಹಳಿಯಿಂದ ದೂರ ಸರಿದಿದ್ದಾನೆ. ಇದಾದ ನಂತರ ಕೋಪಗೊಂಡ ಲೋಕೋ ಪೈಲೆಟ್​​​ಯುವಕನ ಮೇಲೆ ಕಲ್ಲು ಎಸೆಯುವುದನ್ನು ನೋಡಬಹುದು. ಕೂಡಲೇ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ.

ಈ ವಿಡಿಯೋವನ್ನು ಇದುವರೆಗೂ 17.1 ಮಂದಿ ವೀಕ್ಷಿಸಿದ್ದಾರೆ. ಕೆಲವರು ಪ್ರೀತಿಯಲ್ಲಿ ಮನುಷ್ಯ ಕಿವುಡನಾಗುತ್ತಾನೆ ಎಂದರೆ ಮತ್ತೆ ಕೆಲವರು ಅಂತಹವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net