

ಬ್ರೆಸಿಲಿಯಾ: ಬ್ರೆಜಿಲ್ನಿಂದ ಅಚ್ಚರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral)ಆಗಿದೆ. ವಾಸ್ತವವಾಗಿ ಇಲ್ಲಿ ಸಾವೊ ಪಾಲೊದಲ್ಲಿನ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಏರ್ವೇಸ್ ವಿಮಾನಕ್ಕೆ ಸಿಡಿಲು ಬಡಿದಿದೆ. ಈ ಅಪರೂಪದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ವೈರಲ್ ವಿಡಿಯೋದಲ್ಲಿ ಬ್ರಿಟಿಷ್ ಏರ್ವೇಸ್ನ A350-1041 ವಿಮಾನವು ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಿರುವುದನ್ನು ಕಾಣಬಹುದು. ಹವಾಮಾನವು ಬದಲಾಗಿದ್ದು ಆಕಾಶದಲ್ಲಿ ಸಿಡಿಲು ಮತ್ತು ಮಿಂಚು ಬೀಳುತ್ತದೆ. ಈ ಸಮಯದಲ್ಲಿ ಮಿಂಚು ನೇರವಾಗಿ ವಿಮಾನದ ಹಿಂದಿನ ಬಾಲಕ್ಕೆ ಹೊಡೆಯುವುದನ್ನು ನೋಡಬಹುದು.
ಈ 11 ಸೆಕೆಂಡುಗಳ ಅದ್ಭುತ ದೃಶ್ಯದ ವಿಡಿಯೋವನ್ನು ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯಲ್ಲಿ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. ವಾಸ್ತವವಾಗಿ ಸಿಡಿಲು ವಿಮಾನವನ್ನು ಹೊಡೆದಾಗ ಪ್ರಯಾಣಿಕರಿಗೆ ಸಾಮಾನ್ಯವಾಗಿ ಯಾವುದೇ ಹಾನಿಯಾಗುವುದಿಲ್ಲ. ಏಕೆಂದರೆ ಮಿಂಚಿನ ಪ್ರಭಾವವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.(ಏಜೆನ್ಸೀಸ್)