ಪೋಸ್ಟರ್ ಗಾತ್ರದ ಬೋರ್ಡಿಂಗ್ ಪಾಸ್​ ಜತೆಗೆ ಏರ್​ಪೋರ್ಟ್​ ತಲುಪಿದ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

blank

ಸ್ನೇಹಿತರಿಗೆ ಏನಾದರೂ ಕೆಲಸ ಹೇಳಿದರೆ ಅದರ ಫಲಿತಾಂಶವು ಹೇಗಿರತ್ತದೆ ಎಂಬುದನ್ನು ನಾವು ವಿಶೇಷವಾಗಿ ಹೇಳಬೇಕಿಲ್ಲ. ಹೇಳುವುದಕ್ಕಿಂತ ಹೆಚ್ಚಿನದಾಗೇ ಏನಾದರೂ ಮಾಡಿರುತ್ತಾರೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video) ಆಗುತ್ತಿದೆ. ವಿಡಿಯೋದಲ್ಲಿ ವಿಮಾನ ಟಿಕೆಟ್‌ನೊಂದಿಗೆ ಪ್ರಯಾಣಿಸಲು ಬಂದ ವ್ಯಕ್ತಿಗೆ ಇದೇ ರೀತಿಯ ಸಂಭವಿಸುತ್ತದೆ. ವ್ಯಕ್ತಿ ತನ್ನ ಸ್ನೇಹಿತನಿಗೆ ಬೋರ್ಡಿಂಗ್ ಪಾಸ್‌ನ ಪ್ರಿಂಟ್​​ಔಟ್​ ತರುವಂತೆ ಹೇಳುತ್ತಾನೆ. ಆತನ ಸ್ನೇಹಿತ ಬೋರ್ಡಿಂಗ್ ಪಾಸ್ ಅನ್ನು A4 ಗಾತ್ರದ ಪುಟದಲ್ಲಿ ಮುದ್ರಿಸುವ ಬದಲು ಪೋಸ್ಟರ್‌ನಂತೆ ತರುತ್ತಾನೆ.

ಇದನ್ನು ಓದಿ: ರೀಲ್ಸ್​ಗಾಗಿ ರೈಲಿನ ಸೀಟು ಹರಿದ ಆಸಾಮಿ; Viral Videoನೋಡಿ ನಿನಗೆ ಹುಚ್ಚು ಎಂದ ನೆಟ್ಟಿಗರು

ವಿಮಾನವನ್ನು ಹಿಡಿಯುವಲ್ಲಿ ಯಾವುದೇ ವಿಳಂಬವಾಗಬಾರದಯ ಎಂದು ಆ ವ್ಯಕ್ತಿಯು ಅದೇ ಬೋರ್ಡಿಂಗ್ ಪಾಸ್​​ನೊಂದಿಗೆ ವಿಮಾನ ನಿಲ್ದಾಣವನ್ನು ಪ್ರವೇಶಿಸುತ್ತಾನೆ. ಆದರೆ ಸಿಐಎಸ್ಎಫ್ ಜವಾನ ಆ ಪಾಸ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದಾಗ ಅವರು ನಗಲು ಪ್ರಾರಂಭಿಸುತ್ತಾರೆ.

ವೈರಲ್​ ವಿಡಿಯೋದಲ್ಲಿ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಗೇಟ್‌ನಲ್ಲಿ ಬೋರ್ಡಿಂಗ್ ಪಾಸ್ ತೋರಿಸುತ್ತಿರುವುದನ್ನು ಕಾಣಬಹುದು. ಆದರೆ ಈ ಬೋರ್ಡಿಂಗ್ ಪಾಸ್ ಸಾಮಾನ್ಯ ಪಾಸ್​ನಂತೆ ಇಲ್ಲ. ಬದಲಿಗೆ ಅದು ಪೋಸ್ಟರ್ ಗಾತ್ರದ ಬೋರ್ಡಿಂಗ್ ಪಾಸ್ ಆಗಿದೆ. ಇದನ್ನು ಪರಿಶೀಲಿಸುತ್ತಿರುವ ಸಿಬ್ಬಂದಿಯು ನಗುತ್ತಿರುವುದನ್ನು ಕಾಣಬಹುದು.

 

View this post on Instagram

 

A post shared by Vinod (@vins.740)

ಈ ವಿಡಿಯೋವನ್ನು ಇದುವರೆಗೂ 1 ಕೋಟಿ 70 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ನೀವು ವಿಮಾನವನ್ನು ತೆಗೆದುಕೊಳ್ಳುತ್ತೀರಾ ಅಥವಾ ಬೋರ್ಡಿಂಗ್ ಪಾಸ್‌ನಲ್ಲಿ ಮಾತ್ರ ಹಾರಲು ಯೋಜಿಸುತ್ತಿದ್ದೀರಾ?, ರಿಟರ್ನ್ ಟಿಕೆಟ್ ಕೂಡ ಹೀಗೆ ಪ್ರಿಂಟ್ ಮಾಡಲಾಗಿದೆಯೇ, ಒಂದು ರೀಲ್ ಮಾಡಲು ಇಷ್ಟು ದೊಡ್ಡ ಪ್ರಿಂಟಿಂಗ್ ಪಾಸ್ ತೆಗೆಯಲಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ.

Happy New Year 2025 | ಪಟಾಕಿ ಸಿಡಿಸುವಲ್ಲಿ ಗಿನ್ನೆಸ್​ ದಾಖಲೆ ಬರೆದ ಅಬುಧಾಬಿ

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…