ಪಾಕಿಸ್ತಾನದಲ್ಲಿ ನವರಾತ್ರಿ ಸೆಲೆಬ್ರೇಷನ್​​; ವಿಡಿಯೋ ನೋಡಿ ನೆಟ್ಟಿಗರು ಖುಷ್​​ | Viral Video

Untitled-design-2024-10-08T200340.264
Published on

ಇಸ್ಲಾಮಾಬಾದ್​​: ಭಾರತದಲ್ಲಿ ಅಕ್ಟೋಬರ್​ 3ರಿಂದ ನವರಾತ್ರಿ ಹಬ್ಬದ ಸಂಭ್ರಮಾಚರಣೆ ಆರಂಭವಾಗಿದೆ. ಆದರೆ ನೆರೆರಾಷ್ಟ್ರ ಪಾಕಿಸ್ತಾನದಲ್ಲಿಯೂ ಹಿಂದೂಗಳು ವಾಸಿಸುತ್ತಿದ್ದಾರೆ ಎಂಬುದನ್ನು ಯಾರು ಮರೆಯುವಂತಿಲ್ಲ. ಅಲ್ಲಿಯೂ ಹಿಂದೂ ಹಬ್ಬಗಳ ಸಮಯದಲ್ಲಿ ಶಾಂತಿಯುತವಾಗಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಕ್ಕೆ ಪೂರಕವೆಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​(Viral Video)

ಆಗುತ್ತಿದೆ. ವ್ಯಕ್ತಿಯೊಬ್ಬರು ಪಾಕಿಸ್ತಾನದ ದೇವಸ್ಥಾನದಲ್ಲಿ ನವರಾತ್ರಿಯ ಸಂಭ್ರಮದ ವಿಡಿಯೋ ಮಾಡಿದ್ದಾರೆ.

ವೈರಲ್​​ ವಿಡಿಯೋದಲ್ಲಿ ದೇವಸ್ಥಾನದ ಹೊರಗೆ ಮಾತೆ ದುರ್ಗೆಯ ದೊಡ್ಡ ಚಿತ್ರವಿದ್ದು, ಇಡೀ ಬೀದಿಯನ್ನು ದೀಪಗಳಿಂದ ಅಲಂಕರಿಸಿರುವುದನ್ನು ಕಾಣಬಹುದು. ಇದಲ್ಲದೆ ಮಾತಾ ರಾಣಿಯ ದೇವಾಲಯವನ್ನು ಸಹ ಅಲಂಕಾರಗೊಳಿಸಲಾಗಿದೆ. ರಸ್ತೆಯನ್ನು ದೀಪಾಲಂಕೃತದಿಂದ ಮಿಂಚುತ್ತಿರುವುದನ್ನು ನೋಡಬಹುದು.

ನವರಾತ್ರಿಯ ನಾಲ್ಕನೇ ದಿನದ ದೃಶ್ಯದ, ಸುಮಾರು 23 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಾಗೂ 10 ಸಾವಿರ ಮಂದಿ ಲೈಕ್​ ಮಾಡಿದ್ದಾರೆ. ನೆಟ್ಟಿಗರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲರೂ ಉತ್ತಮ ಹಬ್ಬವನ್ನು ಹೊಂದಿದ್ದೀರಿ ಎಂದು ಭಾವಿಸುತ್ತೇವೆ!, ಯುಕೆಯಿಂದ ಶುಭಾಶಯಗಳು, ಭಾರತದ ಮುಂಬೈನಿಂದ ಒಂದು ದೊಡ್ಡ ಹಲೋ!, ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಸಹೋದರ ಸಹೋದರಿಯರಿಗೆ ನವರಾತ್ರಿಯ ಶುಭಾಶಯಗಳು ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net