ಶಿಕ್ಷಕಿಯಿಂದ ಮಸ್ತ್​​ ರ್‍ಯಾಂಪ್‌ ವಾಕ್; 2 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವ ಈ ವಿಡಿಯೋಗಿದೆ ಸಖತ್​ ಕ್ರೇಜ್​​​ | Viral Video

Untitled-design-2024-10-08T203025.032
Published on

ಮುಂಬೈ: ಎಲ್ಲರ ಜೀವನದಲ್ಲೂ ಕಾಲೇಜು ಫೆಸ್ಟ್​ ಎಂಬುದು ಮರೆಯಲಾಗದ ಸಂಭ್ರಮಾಚರಣೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಇತರ ಪ್ರತಿಭೆಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂತಹ ಒಂದು ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ವೇದಿಕೆಯಲ್ಲಿ ರ್‍ಯಾಂಪ್‌ ವಾಕ್​​​​ ಮಾಡುವುದನ್ನು ಕಾಣಬಹುದು.

ವೈರಲ್​ ವಿಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಗೆ ರ್‍ಯಾಂಪ್‌ ವಾಕ್​ ಮಾಡುವಂತೆ ವಿನಂತಿಸುತ್ತಾರೆ. ಅದರ ನಂತರ ಮೇಡಮ್ ತನ್ನ ವಿದ್ಯಾರ್ಥಿಗಳ ಮನವಿಗೆ ಒಪ್ಪಿಗೆ ನೀಡುತ್ತಾರೆ ಮತ್ತು ರ್‍ಯಾಂಪ್‌ ವಾಕ್ ಮಾಡಲು ಪ್ರಾರಂಭಿಸುವದನ್ನು ಕಾಣಬಹುದು. ಆಕೆ ರ‍್ಯಾಂಪ್ ವಾಕ್ ಮಾಡುವುದನ್ನು ಕಂಡು ವಿದ್ಯಾರ್ಥಿಗಳು ತುಂಬಾ ಉತ್ಸುಕರಾಗಿ ಶಿಕ್ಷಕಿಯನ್ನು ಹುರಿದುಂಬಿಸುತ್ತಾರೆ ಮತ್ತು ಶಿಳ್ಳೆ ಮತ್ತು ಚಪ್ಪಾಳೆ ತಟ್ಟಲು ಪ್ರಾರಂಭಿಸುತ್ತಾರೆ. ಮೇಡಂ ಅವರ ರ್‍ಯಾಂಪ್‌ ವಾಕ್​​ ನೋಡಿದ ನಂತರ ಒಬ್ಬ ವಿದ್ಯಾರ್ಥಿಯು ವೇದಿಕೆಯ ಮೇಲೆ ಕೆಳಗೆ ಬೀಳುವುದನ್ನು ನೋಡಬಹುದು.

ಈ ವೀಡಿಯೋ ಮುಂಬೈನ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (NMIS)ನಿಂದ ಬಂದಿದೆ ಎಂದು ಹೇಳಲಾಗುತ್ತಿದೆ. 12 ಸೆಕೆಂಡುಗಳ ಈ ವಿಡಿಯೋವನ್ನು 2 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 14 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ. ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಮಾಡೆಲ್ ಆಗಲು ಜನಿಸಿದ ಮಹಿಳೆ ಶಿಕ್ಷಕಿಯಾಗಿದ್ದಾರೆ, ಮೇಡಮ್​ರ ರ್‍ಯಾಂಪ್‌ ವಾಕ್​​ ಅದ್ಭುತವಾಗಿದೆ, ಅವಳನ್ನು ನೋಡಿದ ನಂತರ ಬೀಳುವಂತೆ ನಟಿಸಿದ ಹುಡುಗ ಕೂಡ ಅದ್ಭುತವಾಗಿದ್ದಾನೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net