

ಪ್ರತಿದಿನ ನಾವು ಒಂದಲ್ಲಾ ಒಂದು ವಿಡಿಯೋಗಳು ವೈರಲ್ ಆಗುವುದನ್ನು ನೋಡುತ್ತೇವೆ. ಹೃದಯಸ್ಪರ್ಶಿ ವಿಡಿಯೋಗಳು ಲಭಿಸುವುದು ತೀರಾ ವಿರಳ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video)ಆಗುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬರು ಅಪಾಯದಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ್ದಾರೆ. ಆ ಯುವಕನನ್ನು ಎಲ್ಲರೂ ಹೊಗಳುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಪ್ಪು ಬಣ್ಣದ ಕೊಳಕು ಚರಂಡಿಯಲ್ಲಿ ಹಸುವೊಂದು ಸಿಲುಕಿಕೊಂಡಿರುವುದನ್ನು ಕಾಣಬಹುದು. ಅದನ್ನು ಹೊರತೆಗೆಯಲು ಒಬ್ಬ ವ್ಯಕ್ತಿಯು ಚರಂಡಿಗೆ ಇಳಿದಿದ್ದಾರೆ. ಹಸುವನ್ನು ಕೊಳಕಿನಿಂದ ಹೊರತೆಗೆದ ನಂತರವೇ ವಿಶ್ರಾಂತಿ ಪಡೆಯುತ್ತಾರೆ. ತನ್ನ ಪ್ರಾಣದ ಬಗ್ಗೆಯೂ ಚಿಂತಿಸದೆ ಮುಗ್ಧ ಜೀವಿಯನ್ನು ಉಳಿಸಲು ಚರಂಡಿಗೆ ಇಳಿದು ಅದನ್ನು ಹೊರತೆಗೆದ ಬಳಿಕ ಚರಂಡಿಯಿಂದ ಹೊರಬರುವ ವ್ಯಕ್ತಿಯನ್ನು ನೋಡಿದ ಪ್ರತಿಯೊಬ್ಬರು ಆತನನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
ಈ ವಿಡಿಯೋವನ್ನು ಇದುವರೆಗೂ 2 ಕೋಟಿ 40 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಮಾನವೀಯತೆ ಇನ್ನು ಉಳಿದಿದೆ, ಆತನ ಲಾಕೆಟ್ ಹೇಳುತ್ತಿದೆ ಆತ ಶಿವನ ಭಕ್ತನೆಂದು, ಗುಡ್ ವರ್ಕ್ ಬ್ರದರ್ ದಿಲ್ ಸೇ ಸೆಲ್ಯೂಟ್, ಉತ್ತಮ ಕೆಲಸ ಬ್ರದರ್ ಎಂದು ಕಾಮೆಂಟ್ ಮಾಡಿದ್ದಾರೆ.