ಇತ್ತೀಚಿನ ದಿನಗಳಲ್ಲಿ ಅನೇಕ ಶಾಲೆಗಳು ಹೊಸ ವಿಧಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸುತ್ತಿವೆ. ಈಗ ಶಾಲೆಗಳಲ್ಲಿ ಪುಸ್ತಕದ ಜ್ಞಾನದ ಜತೆಗೆ ಹೆಚ್ಚಿನ ವಿಷಯಗಳನ್ನು ಕಲಿಯಲು ಸಾಧ್ಯವಾಗುವಂತೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಸಹ ಮಾಡಲಾಗುತ್ತಿದೆ. ಮಕ್ಕಳ ಒಂದು ಮೋಜಿನ ಚಟುವಟಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್( Viral Video) ಆಗುತ್ತಿದೆ. ಇದರಲ್ಲಿ ಎಲ್‌ಕೆಜಿ ತರಗತಿಯ ಮಕ್ಕಳ ಗುಂಪೊಂದು ತಮ್ಮ ಶಾಲೆಯಲ್ಲಿ ಚಹಾ ತಯಾರಿಸುತ್ತಿದೆ.
ಇದನ್ನು ಓದಿ: ಕೇರಳದ ‘ವಾಟರ್ ಮೆಟ್ರೋ’ ಪರಿಚಯಿಸಿದ ವಿದೇಶಿಗ; ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ.. | Water Metro
ಈ ವೈರಲ್ ವಿಡಿಯೋದಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ದೊಡ್ಡ ಮೇಜಿನ ಮೇಲೆ ಚಹಾ ತಯಾರಿಸುವುದನ್ನು ಕಾಣಬಹುದು. ಇದರಲ್ಲಿ ಒಂದು ಮಗು ಅವರ ಟೀಮ್ನ ಲೀಡರ್ ಆಗಿದ್ದಾನೆ. ಆತ ಇತರ ವಿದ್ಯಾರ್ಥಿಗಳಿಗೆ ಒಂದೊಂದಾಗಿ ಚಹಾ ಮಾಡುವ ವಿಧಾನವನ್ನು ಹೇಳುತ್ತಿದ್ದಾನೆ. ಮೈಕ್ ಮುಂದೆ ನಿಂತು ಅವನು ಎಲ್ಲಾ ಮಕ್ಕಳನ್ನು ಒಬ್ಬೊಬ್ಬರಾಗಿ ಚಹಾಕ್ಕೆ ಪದಾರ್ಥಗಳನ್ನು ಸೇರಿಸಲು ಕರೆಯುತ್ತಿದ್ದಾನೆ. ಮಕ್ಕಳು ತಮ್ಮ ಸರದಿಯ ಪ್ರಕಾರ ಮಣ್ಣಿನ ಪಾತ್ರೆಯಲ್ಲಿ ನೀರು, ಚಹಾಪುಡಿ, ಸಕ್ಕರೆ, ಶುಂಠಿ, ಹಾಲನ್ನು ಹಾಕುತ್ತಾರೆ. ಚಹಾ ಸಿದ್ಧವಾದಾಗ ಎಲ್ಲಾ ಮಕ್ಕಳು ಅದರ ವಾಸನೆಯನ್ನು ಗ್ರಹಿಸಿ ಚೆನ್ನಾಗಿದೆ ಎಂದು ಹೇಳುತ್ತಾ ಕುಡಿಯಲು ಪ್ರಾರಂಭಿಸುತ್ತಾರೆ.
LKG ತರಗತಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗಾಗಿ ಮತ್ತು ಪ್ರಾಂಶುಪಾಲರಿಗಾಗಿ ಚಹಾ ತಯಾರಿಸುತ್ತಿದ್ದಾರೆ. ಚಹಾ ಮಾಡುವಾಗ ಚಿಕ್ಕ ಮಕ್ಕಳ ಉತ್ಸಾಹ ಸ್ಪಷ್ಟವಾಗಿ ಕಂಡುಬರುತ್ತದೆ. ಹೊಸದನ್ನು ಮೋಜಿನ ರೀತಿಯಲ್ಲಿ ಕಲಿಯುವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 5 ಮಿಲಿಯನ್ ಮಂದಿ ವೀಕ್ಷಿಸಿದ್ದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಚಟುವಟಿಕೆಯನ್ನು ಮುದ್ದಾಗಿದೆ ಎಂದು ಬಣ್ಣಿಸಿದ್ದಾರೆ. ಬಹಳ ಚೆನ್ನಾಗಿದೆ, ಇದು ಯಾವು ಶಾಲೆಯಪ್ಪಾ?, ನಮ್ಮ ಕಾಲದಲ್ಲಿ ವಿಜ್ಞಾನ ಸ್ಪರ್ಧೆಗಳು ಇರುತ್ತಿದ್ದವು ಎಂತಹ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮದುವೆಯ ಫೋಟೋಶೂಟ್ ವೇಳೆ ನಡೆದಿದ್ದು ಮಾತ್ರ ಧಾರುಣ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..