ಪ್ರತಿ ವರ್ಷ ವಿಶ್ವದ ಮೂಲೆಮೂಲೆಗಳಿಂದ ಹಲವಾರು ವಿದೇಶಿಯರು ಭಾರತಕ್ಕೆ ಭೇಟಿ ನೀಡುತ್ತಾರೆ. ಅನೇಕ ವಿದೇಶಿಯರು ಭಾರತೀಯ ಸಂಸ್ಕೃತಿ, ಆಹಾರ, ಬಟ್ಟೆ ಮತ್ತು ಭಾಷೆಯನ್ನು ತುಂಬಾ ಇಷ್ಟಪಡುತ್ತಾರೆ. ಅವರು ಇಲ್ಲಿ ನೆಲೆಸುತ್ತಾರೆ ಮತ್ತು ಸ್ಥಳೀಯ ಪದ್ಧತಿಗಳಿಗೆ ಹೊಂದಿಕೊಳ್ಳಲು ಪ್ರಾರಂಭಿಸುತ್ತಾರೆ. ಇಲ್ಲಿಯ ಭಾಷೆ ಮತ್ತು ಸಂಪ್ರದಾಯವನ್ನು ಅನುಸರಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅಂತಹದ್ದೇ ವಿಡಿಯೋವೊಂದು ವೈರಲ್(Viral Video) ಆಗಿದೆ.
ಇದನ್ನು ಓದಿ: ಪುಟ್ಟ ಪೋರಿಯ ಬ್ಯಾಟಿಂಗ್ಗೆ ನೋಡುಗರು ಫಿದಾ; Viral Video ನೋಡಿ ರೋಹಿತ್ ಶರ್ಮಾರ ಪ್ರತಿಕೃತಿ ಎಂದು ಹೊಗಳಿದ ನೆಟ್ಟಿಗರು
ವೈರಲ್ ವಿಡಿಯೋದಲ್ಲಿ ಕಾಣುವ ಜರ್ಮನ್ ಮಹಿಳೆಯ ಹೆಸರು ಕ್ಲಾರಾ, ಅವರು ವೃತ್ತಿಯಲ್ಲಿ ಜರ್ಮನ್ ಶಿಕ್ಷಕಿ. ವಿಡಿಯೋ ನೋಡಿದಾಗ ಕ್ಲಾರಾ ಸ್ವಲ್ಪ ಸಮಯದಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ ಮತ್ತು ಮಲಯಾಳಂ ಭಾಷೆಯನ್ನು ಕಲಿಯುತ್ತಿದ್ದಾರೆ ಎಂದು ತೋರುತ್ತದೆ. ಕ್ಲಾರಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನೊಂದಿಗೆ ಮಲಯಾಳಂನಲ್ಲಿ ಮಾತನಾಡುತ್ತಿರುವುದನ್ನು ನೋಡಬಹುದು.
ವಿದೇಶಿ ಮೇಡಂ ಮಲಯಾಳಂ ಮಾತನಾಡುವುದನ್ನು ನೋಡಿ ಉಬರ್ ಚಾಲಕ ಆಶ್ಚರ್ಯ ಪಡುತ್ತಾನೆ. ನಂತರ ಕ್ಲಾರಾ ಅವನನ್ನು “ನೀವು ಎಂದಿಗೂ ವಿದೇಶಿಯೊಬ್ಬ ಮಲಯಾಳಂ ಮಾತನಾಡುವುದನ್ನು ಕೇಳಿಲ್ಲವೇ” ಎಂದು ಕೇಳುತ್ತಾಳೆ. ಅದಕ್ಕೆ ಚಾಲಕ “ಇಲ್ಲ” ಎಂದು ಉತ್ತರಿಸುತ್ತಾನೆ. ಕ್ಲಾರಾ ನಿಲ್ಲದೆ ಮಲಯಾಳಂನಲ್ಲಿ ಮಾತನಾಡುತ್ತಲೇ ಇರುತ್ತಾಳೆ. ಉಬರ್ ಚಾಲಕ ಅವಳನ್ನು ಮಲಯಾಳಂ ಚೆನ್ನಾಗಿ ಮಾತನಾಡಿದ್ದಕ್ಕಾಗಿ ಹೊಗಳುವುದನ್ನು ಕೇಳಬಹುದು.
ಈ ವಿಡಿಯೋವನ್ನು ಮೆಚ್ಚಿಕೊಂಡ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ನನಗೆ ತುಂಬಾ ಅಸೂಯೆ ಆಗ್ತಿದೆ, ಅವರು ನನಗಿಂತ ಚೆನ್ನಾಗಿ ಮಲಯಾಳಂ ಮಾತನಾಡುತ್ತಾರೆ, ನಾನು ಸೈಕಲ್ ಮುಂದೆ ಹಾರಿ ಸಾಯಬೇಕು, ನೀವು ನನಗಿಂತ ಚೆನ್ನಾಗಿ ಮಲಯಾಳಂ ಮಾತನಾಡುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಟೋಲ್ ಪ್ಲಾಜಾದಲ್ಲಿ ಮಹಿಳೆ ಮಾಡಿದ್ದು ಎಂಥಾ ಕೆಲಸ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..